ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಾಗಲ್ಯಾಂಡ್ ಗೃಹಮಂತ್ರಿ ರಾಜಿನಾಮೆ

Mainashree
Updated On : 19 Feb 2013, 3:05 am

ಕೊಹಿಮಾ: ನಾಗಲ್ಯಾಂಡ್ ಗೃಹ ಸಚಿವ ಇಮ್ಕಾಂಗ್ ಎಲ್.ಇಮ್ಚೆನ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ನಾಗ ಪೀಪಲ್ ಫ್ರಂಟ್(ಎನ್‌ಪಿಎಫ್) ಆಡಳಿತ ಪಕ್ಷ ಮಂಗಳವಾರ ತಿಳಿಸಿದೆ.

ಕಾರಿನಲ್ಲಿ 1.10ಕೋಟಿ ನಗದು, ಶಸ್ತ್ರಾಸ್ತ್ರಗಳನ್ನು ಹಾಗೂ ಮದ್ಯವನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದು, ಪ್ರಸ್ತುತ ವಿಚಾರಣೆಯಲ್ಲಿರುವ ಇಮ್ಕಾಂಗ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ನೆಫ್ಚು ರಿಯೋ ಅವರಿಗೆ ರಾಜಿನಾಮೆ ಸಲ್ಲಿಸಿದ ನಂತರ ಮಾತನಾಡಿದ ಇಮ್ಕಾಂಗ್, ನಾನು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ, ಪಕ್ಷದ ಮುಖಂಡರಿಂದ ರಾಜಿನಾಮೆ ನೀಡುವಂತೆ ಒತ್ತಾಯ ಬಂದ ಹಿನ್ನಲೆಯಲ್ಲಿ ರಾಜಿನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಗೃಹ ಸಚಿವ ಇಮ್ಕಾಂಗ್ ಎಲ್.ಇಮ್ಚೆನ್ ಬೆಳಗ್ಗೆ 6ಗಂಟೆಗೆ ಕಾರಿನಲ್ಲಿ ತಮ್ಮ ಕ್ಷೇತ್ರವಾದ ಕೊರಿಡಾಂಗ್ ಎಂಬಲ್ಲಿಗೆ ತೆರಳುತ್ತಿದ್ದ ವೇಳೆ ಅವರನ್ನು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಬಂಧಿಸಿದ್ದು, ಕಾರಿನಲ್ಲಿದ್ದ ನಗದು, ಶಸ್ತ್ರಾಸ್ತ್ರ, ಮದ್ಯವನ್ನು ವಶಪಡಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ನಾಗಾಲ್ಯಾಂಡ್ ನಲ್ಲಿ 23ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಇಮ್ಕಾಂಗ್ ಅವರು ನಾಗಾ ಪೀಪಲ್ಸ್ ಫ್ರಂಟ್‌ನ ಅಭ್ಯರ್ಥಿಯಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement