ಮುಷ್ಕರದಿಂದ ರು.20,000 ಕೋಟಿ ನಷ್ಟ: ಅಸೋಚಾಮ್
ಕೇಂದ್ರ ಕಾರ್ಮಿಕ ಒಕ್ಕೂಟಗಳ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರದಿಂದಾಗಿ ಅಭಿವೃದ್ಧಿ ದರದಲ್ಲಿ ...
ಕೊಲ್ಕತ್ತಾ: ಕೇಂದ್ರ ಕಾರ್ಮಿಕ ಒಕ್ಕೂಟಗಳ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರದಿಂದಾಗಿ ಅಭಿವೃದ್ಧಿ ದರದಲ್ಲಿ ರು.15000-20,000 ಕೋಟಿ ರು.ಗಳ ನಷ್ಟ ಸಂಭವಿಸಲಿದೆ ಎಂದು ದೇಶದ ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್ ಹೇಳಿದೆ.
ದೇಶದ ಆರ್ಥಿಕತೆ ಕುಸಿಯುತ್ತಿದ್ದು, ಮುಷ್ಕರದಿಂದಾಗಿ ಇದು ಇನ್ನಷ್ಟು ಕ್ಷೀಣಿಸಲಿದೆ. ಅಗತ್ಯ ವಸ್ತುಗಳ ಪೂರೈಕೆ ಮುಷ್ಕರದಿಂದಾಗಿ ಸ್ಥಗಿತಗೊಳ್ಳಲಿದ್ದು, ಇದು ಅಭಿವೃದ್ಧಿ ದರವನ್ನು ಬಾಧಿಸಲಿದೆ ಎಂದು ಅಸೋಚಾಮ್ ಅಧ್ಯಕ್ಷ ರಾಜ್‌ಕುಮಾರ್ ಧೂತ್ ಹೇಳಿದ್ದಾರೆ.
ಮುಷ್ಕರದಿಂದಾಗಿ ಬ್ಯಾಂಕಿಂಗ್, ವಿಮೆ ಹಾಗು ಸಾರಿಗೆ ಸಂಚಾರ ಕುಂಟಿತವಾಗಲಿದ್ದು, ಇದು ಕೈಗಾರಿಕೋದ್ಯಮದ ಮೇಲೆ ಪ್ರಭಾವ ಬೀರಲಿದೆ.
ಏತನ್ಮಧ್ಯೆ, ತರಕಾರಿ ಹಾಗು ಬೇಗನೆ ಕೊಳೆತು ಹೋಗುವ ವಸ್ತುಗಳ ವಹಿವಾಟು ಸಮರ್ಪಕ ರೀತಿಯಲ್ಲಿ ನಡೆಯದಿದ್ದರೆ ಅದು ಕೃಷಿ ವಲಯದಲ್ಲೂ ನಷ್ಟವನ್ನುಂಟು ಮಾಡುತ್ತದೆ ಎಂದು ಧೂತ್ ಹೇಳಿದ್ದಾರೆ.
ಆದಾಗ್ಯೂ, ಎರಡು ದಿನಗಳ ಮುಷ್ಕರದಿಂದಾಗಿ ದಿನನಿತ್ಯದ ಉತ್ಪನ್ನಗಳ ತಲಾ ಆದಾಯದ ಮೇಲೆ 30-40 ಶೇ. ನಷ್ಟವುಂಟಾಗಲಿದೆ ಎಂದು ಅಸೋಚಾಮ್ ಹೇಳಿದೆ.