ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸೂರ್ಯನೆಲ್ಲಿ ಪ್ರಕರಣ: ಎಂಪಿ ವಿರುದ್ಧ ಕೇಸು ದಾಖಲಿಸಲು ನಿರಾಕರಿಸಿದ ಸರ್ಕಾರ

Mainashree
Updated On : 19 Feb 2013, 3:54 am

ತಿರುವದನೈ: ಸೂರ್ಯನೆಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ಕೆ.ಸುಧಾಕರನ್ ವಿರುದ್ಧ ಪ್ರಕರಣ ದಾಖಲಿಸಲು ಕೇರಳ ಸರ್ಕಾರ ಮಂಗಳವಾರ ನಿರಾಕರಿಸಿದೆ.

ಸೂರ್ಯನೆಲ್ಲಿ ಗ್ಯಾಂಗ್ ರೇಪ್‌ನ ಬಲಿಪಶು ಓರ್ವ ಬಾಲ ವೈಶ್ಯೆ ಎಂದು ಕಾಂಗ್ರೆಸ್ ಸಂಸದ ಕೆ.ಸುಧಾಕರನ್ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡಿಸಿದ್ದವು.

(ಸಿಪಿಐ-ಎಂ)ನ ಕೆ.ಎಸ್ ಸಲೀಖ ಎಂಬುವವರು ಸುಧಾಕರನ್ ವಿರುದ್ಧ ಕೇಸು ದಾಖಲಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದರು. ಅರ್ಜಿಯನ್ನು ಕೇರಳದ ಗೃಹ ಇಲಾಖೆ ತಿರಸ್ಕರಿಸಿದೆ.

ಕೆ.ಸುಧಾಕರನ್ ಅವರು ಹೇಳಿಕೆ ಸಮಂಜಸವಲ್ಲ. ಆದರೆ ಅವರ ಮೇಲೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಕೇರಳದ ಗೃಹ ಮಂತ್ರಿ ರಾಧಾಕೃಷ್ಣನ್ ಹೇಳಿದ್ದಾರೆ.

ಕೆ.ಸುಧಾಕರನ್ ಅವರ ಈ ಹೇಳಿಕೆ ಅಪರಾಧಿಗಳಿಗೆ ರಕ್ಷಣೆ ನೀಡುವಂತಿದೆ ಎಂದು ಸಲೀಖ ಅವರು ಆಪೋಪಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement