3 ಸಹೋದರಿಯರನ್ನು ಅತ್ಯಾಚಾರವೆಸಗಿ ಕೊಂದು, ಬಾವಿಗೆ ತಳ್ಳಿದ್ರು..
ದೆಹಲಿ ಸಾಮೂಹಿಕ ಅತ್ಯಾಚಾರದ ನೋವು ಜನಮಾನಸದಿಂದ ಮಾಸುವ ಮುನ್ನವೇ ...
ಭಂಡಾರ, ಮಹಾರಾಷ್ಟ್ರ: ದೆಹಲಿ ಸಾಮೂಹಿಕ ಅತ್ಯಾಚಾರದ ನೋವು ಜನಮಾನಸದಿಂದ ಮಾಸುವ ಮುನ್ನವೇ ಇದೀಗ ಅಂಥದ್ದೇ ಒಂದು ಬಬ೯ರ ಕೃತ್ಯ ಮಹಾರಾಷ್ಟ್ರದ ಬಂಢಾರ ಜಿಲ್ಲೆಯಿಂದ ವರದಿಯಾಗಿದೆ.
ಜಿಲ್ಲೆಯ ಗ್ರಾಮವೊಂದರಲ್ಲಿನ ಬಡ ಕುಟುಂಬವೊಂದರ ಮೂವರು ಸಹೋದರಿಯರನ್ನು ಅತ್ಯಾಚಾರಗೈದ ನಂತರ ಕೊಂದು ಬಾವಿಗೆ ತಳ್ಳಲಾಗಿದೆ. 11, 8 ಮತ್ತು 6 ವಯಸ್ಸಿನ ಈ ಮೂವರು ಸಹೋದರಿಯರು ಫೆ.14ರಂದು ತಮ್ಮ ಶಾಲೆಯಿಂದ ಮನೆಗೆ ಬರುತ್ತಿದ್ದ ವೇಳೆ ಕಾಮುಕರ ದಾಹಕ್ಕೆ ಬಲಿಯಾಗಿದ್ದಾರೆ.
ಎರಡು ದಿನಗಳ ನಂತರ ಈ ಸಹೋದರಿಯರ ಮೃತ ದೇಹ ಲಖಾನಿ ನಗರದ ಮೂಮ೯ಡಿ ಗ್ರಾಮದಲ್ಲಿರುವ ಬಾವಿಯೊಂದರಲ್ಲಿ ಪತ್ತೆಯಾಗಿದೆ. ಈ ಬಾವಿಯ ಪಕ್ಕ ಫಾಮ್೯ ಹೌಸ್ ಮತ್ತು ಡಾಬಾ ಇದೆ. ಮಾತ್ರವಲ್ಲದೆ ಬಾವಿಯ ಪಕ್ಕವೇ ಈ ಬಾಲಕಿಯರ ಚಿಕ್ಕ ಚಪ್ಪಲಿಗಳು ಹಾಗು ಖಾಲಿ ಮದ್ಯದ ಬಾಟಲಿ ಪತ್ತೆಯಾಗಿದೆ.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸ್ ಅಧಿಕಾರಿ ರಾಜೇಂದ್ರ ಸಿಂಗ್, ಬಾಲಕಿಯರ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂಬುದು ನಿಜ. ಆದರೆ ಅವರನ್ನು ಹೇಗೆ ಹತ್ಯೆಗೈಯ್ಯಲಾಯಿತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಆದಾಗ್ಯೂ, ಪ್ರಸ್ತುತ ಗ್ರಾಮದಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರವನ್ನು ಖಂಡಿಸಿ ಭಾರೀ ಪ್ರತಿಭಟನೆಗಳನ್ನು ನಡೆಸಲಾಗಿದೆ. ಅತ್ಯಾಚರವೆಸಗಿದ ದುಷ್ಕಮಿ೯ಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.