ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಎಲ್‌ಟಿಟಿಇ ಪ್ರಭಾಕರನ್ ಪುತ್ರನ ಹತ್ಯೆ 'ಯುದ್ಧಾಪರಾಧ': ಜಯಾ

Mainashree
Updated On : 20 Feb 2013, 3:57 am

ಚೆನ್ನೈ: ಎಲ್‌ಟಿಟಿಇ ನಾಯಕ ಪ್ರಭಾಕರನ್ ಅವರ 12ರ ಹರೆಯದ ಪುತ್ರನನ್ನು ಶ್ರೀಲಂಕಾದ ಸೇನಾಪಡೆ ಉಪಾಯದಿಂದ ಹತ್ಯೆಗೈದಿರುವುದು 'ಯುದ್ಧಾಪರಾಧ' ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬುಧವಾರ ಹೇಳಿದ್ದಾರೆ.

ಪ್ರಭಾಕರನ್ ಪುತ್ರ ಗುಂಡಿನ ದಾಳಿಗೆ ಬಲಿಯಾಗಿರಲಿಲ್ಲ, ಬದಲಾಗಿ ಆತನನ್ನು ಉಪಾಯದಿಂದ ಸೆರೆಹಿಡಿದು, ಹತ್ಯೆಗೈಯ್ಯಲಾಗಿತ್ತು ಎಂಬುದನ್ನು ಸಾಕ್ಷ್ಯಚಿತ್ರವೊಂದು ಬಹಿಂಗ ಪಡಿಸಿತ್ತು.

ಪ್ರಭಾಕರನ್ ಪುತ್ರ ಬಾಲಚಂದ್ರನನ್ನು ಹತ್ಯೆಗೈದಿರುವುದು ಯುದ್ಧಾಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜಯಾ, ಶ್ರೀಲಂಕಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅಮೆರಿಕಾ ಪ್ರಕಟಿಸುವಂತೆ ಭಾರತ ಮನವಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಭಾರತ, ಅಮೆರಿಕಾ ಮತ್ತು ಇತರೆ ರಾಷ್ಟ್ರಗಳೊಂದಿಗೆ ಚರ್ಚಿಸಿ, ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಶ್ರೀಲಂಕಾದ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಬೇಕು ಎಂದು ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಲಂ(ಎಲ್‌ಟಿಟಿಇ) ಮುಖ್ಯಸ್ಥ ವಿಲ್ಲುಪಿಳ್ಳೈ ಪ್ರಭಾಕರನ್ ಅವರ ಪುತ್ರ ಬಾಲಚಂದ್ರನ್ ಪ್ರಭಾಕರನ್ ಅವರ ಸಾವಿನ ಮುನ್ನ ತೆಗೆದ ಕೆಲವು ಫೋಟೋಗಳನ್ನು ನೋಡಿ ಜಯಲಲಿತಾ ಈ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಸ್ತುತ ಫೋಟೋದಲ್ಲಿ ಶ್ರೀಲಂಕಾ ಪಡೆಯ ಕಸ್ಟಡಿಯಲ್ಲಿದ್ದ ಬಾಲಚಂದ್ರನ್ ಏನೂ ಗಾಯವಾಗದೆ ಬಂಕರ್ ಪಕ್ಕ ಕುಳಿತ್ತಿದ್ದಾನೆ. ಇದಾದ ನಂತರ ಸ್ವಲ್ಲ ಸಮಯ ಕಳೆದು ತೆಗೆದ ಫೋಟೋದಲ್ಲಿ ಆತನ ಎದೆಯನ್ನು ಗುಂಡು ಸೀಳಿದ್ದು, ರಕ್ತದ ಮಡುವಿನಲ್ಲಿ ಬಿದ್ದ ಚಿತ್ರವಿದೆ. ಈ ಎಲ್ಲಾ ಫೋಟೋಗಳನ್ನು 2009 ಮೇ ತಿಂಗಳಲ್ಲಿ ತೆಗೆಯಲಾಗಿತ್ತು.

2009ರಲ್ಲಿ ಶ್ರೀಲಂಕಾ ಸರ್ಕಾರ ಮತ್ತು ಎಲ್ ಟಿಟಿಇ ನಡುವಿನ ಗುಂಡಿನ ದಾಳಿ ನಡೆದಿದ್ದು ಅದರಲ್ಲಿ ಈ ಹುಡುಗನ ಹತ್ಯೆ ಮಾಡಲಾಗಿತ್ತು. ಆದರೆ ಶ್ರೀಲಂಕಾ ಸೇನೆ, ದಾಳಿ ನಡೆಯುವಾಗ ಪ್ರಭಾಕರನ್‌ನ ಪುತ್ರ ಸೇನೆಯ ಗುಂಡಿಗೆ ಬಲಿಯಾಗಿದ್ದಾನೆ ಎಂದು ಹೇಳಿಕೆ ನೀಡಿತ್ತು.

NO FIRE ZONE,  ಎಂಬ ಸಾಕ್ಷ್ಯಚಿತ್ರವೊಂದರಲ್ಲಿ ಈ ಫೋಟೋಗಳನ್ನು ಬಳಸಲಾಗಿದ್ದು, ಈ ಸಾಕ್ಷ್ಯಚಿತ್ರವನ್ನು ಜೆನಿವಾ ಮಾನವ ಹಕ್ಕು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement