ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಲಿಯಾನ್ ವಾಲಾಭಾಗ್ ಹತ್ಯಾಕಾಂಡ ಅವಮಾನಕರವಾದ ಸಂಗತಿ: ಕೆಮರೂನ್

ಜಲಿಯಾನ್ ವಾಲಾಭಾಗ್ ಗೆ ಬುಧವಾರ ಭೇಟಿ ನೀಡಿದ ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರೂನ್ 1919ರಲ್ಲಿ ನಡೆದ ಜಲಿಯಾನ್ ...

Rashmi Kasaragodu
Updated On : 20 Feb 2013, 3:37 am
ಅಮೃತಸರ್ : ಜಲಿಯಾನ್ ವಾಲಾಭಾಗ್ ಗೆ ಬುಧವಾರ ಭೇಟಿ ನೀಡಿದ ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರೂನ್ 1919ರಲ್ಲಿ ನಡೆದ ಜಲಿಯಾನ್ ವಾಲಾಭಾಗ್ ಹತ್ಯಾಕಾಂಡ ಬ್ರಿಟಿಷ್ ಇತಿಹಾಸದಲ್ಲಿ ನಡೆದ ಅವಮಾನಕರ ಸಂಗತಿ ಎಂದು ಹೇಳಿದ್ದಾರೆ.
ಜಲಿಯಾನ್ ವಾಲಾಭಾಗ್ ನಲ್ಲಿರುವ ವಿಸಿಟರ್ಸ್  ಪುಸ್ತಕದಲ್ಲಿ ಕೆಮರೂನ್ ತಮ್ಮ ಈ ಮಾತನ್ನು ದಾಖಲಿಸಿದ್ದಾರೆ.
ಬ್ರಿಟಿಷ್ ರಾಜ್ ಕಾಲದಲ್ಲಿ ಜನರಲ್ ಡೆಯರ್ ನ ಆದೇಶದಂತೆ 1919ರಲ್ಲಿ ಜಲಿಯಾನ್ ವಾಲಾಭಾಗ್ ಹತ್ಯಾಕಾಂಡ ನಡೆದಿದ್ದು, ಇದರಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದರು.

Advertisement

Advertisement

ಪ್ರಸ್ತುತ ಹತ್ಯಾಕಾಂಡದ ಬಗ್ಗೆ ಮಹಾತ್ಮಾ ಗಾಂಧಿ ಈ ಘಟನೆಯು ಬ್ರಿಟಿಷ್ ಅಧಿಪತ್ಯದ ನೆಲೆಯಲ್ಲೇ ನಡುಗಿಸಿತ್ತು ಎಂದು ಅಂದಿದ್ದರು.
ಜಲಿಯಾನ್ ವಾಲಾಭಾಗ್ ಗ ಭೇಟಿ ನೀಡಿದ ಕೆಮರೂನ್ ಅಲ್ಲಿಂದ ಹೊರಡುವ ಮುನ್ನ ಒಂದು ನಿಮಿಷ ಕಾಲ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಬುಧವಾರ ಬೆಳಗ್ಗೆ ಅಮೃತಸರ್ ಗೆ ಬಂದಿಳಿದ ಕೆಮರೂನ್ ಸಿಖ್ಖರ ಸ್ವಣ೯ ಮಂದಿರಕ್ಕೂ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement