ಭಾರತ್ ಬಂದ್: ನೋಯ್ಡಾದಲ್ಲಿ ಹಿಂಸಾಚಾರ
ಕಾಮಿ೯ಕ ಸಂಘಟನೆಗಳ ಎರಡು ದಿನದ ಮುಷ್ಕರಕ್ಕೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ...
ನವದೆಹಲಿ: ಕಾಮಿ೯ಕ ಸಂಘಟನೆಗಳ ಎರಡು ದಿನದ ಮುಷ್ಕರಕ್ಕೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದೇ ವೇಳೆ ನೋಯ್ಡಾದಲ್ಲಿ ಬಂದ್ ಹಿಂಸಾಚಾರಕ್ಕೆ ತಿರುಗಿದೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿ ಕಾಖಾ೯ನೆಯ ಕೆಲಸಗಾರರು ಕಾಖಾ೯ನೆಗಳ ಮೇಲೆ ಕಲ್ಲು ತೂರಾಟ ಮಾಡಿದ್ದು ಮಾತ್ರವಲ್ಲದೆ ಅಗ್ನಿಶಾಮಕ ದಳದ ವಾಹನ ಸೇರಿದಂತೆ ಇನ್ನಿತರ ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾಜ್೯ ಮಾಡಿದ್ದು, ಇದರಲ್ಲಿ ಕೆಲವು ಪೊಲೀಸರಿಗೆ ಗಾಯಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಂದ್ ಹಿನ್ನೆಲೆಯಲ್ಲಿ ಹರ್ಯಾಣದ ಅಂಬಾಲ ನಗರದಲ್ಲಿ ಕಾಮಿ೯ಕ ಸಂಘಟನೆಯ ಮುಖಂಡನನ್ನು ಹತ್ಯೆಗೈಯ್ಯಲಾಗಿದೆ.
ದೆಹಲಿ, ಪಂಜಾಬ್ , ಬಿಹಾರ್, ಹರ್ಯಾಣ, ಕೇರಳ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕನಾ೯ಟಕ ಹಾಗು ಆಂಧ್ರಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.