ಭಾರತ್ ಬಂದ್: ಪಂಜಾಬ್ ನಲ್ಲಿ ಕಾಮಿ೯ಕ ಮುಖಂಡನ ಕಗ್ಗೊಲೆ
ಎರಡು ದಿನಗಳ ಭಾರತ್ ಬಂದ್ ಆರಂಭಗೊಂಡಿದ್ದು, ಪಂಜಾಬ್ ನ ಅಂಬಾಲಾದಲ್ಲಿ ಕಾಮಿ೯ಕ ಸಂಘಟನೆ...
ನವದೆಹಲಿ: ಎರಡು ದಿನಗಳ ಭಾರತ್ ಬಂದ್ ಆರಂಭಗೊಂಡಿದ್ದು, ಪಂಜಾಬ್ ನ ಅಂಬಾಲಾದಲ್ಲಿ ಕಾಮಿ೯ಕ ಸಂಘಟನೆಯ ನಾಯಕನನ್ನು ಬುಧವಾರ ಬೆಳಗ್ಗೆ ಹತ್ಯೆಗೈಯ್ಯಲಾಗಿದೆ.
ಬಂದ್ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದಕ್ಕಾಗಿ ಅಂಬಾಲಾ ಬಸ್ ನಿಲ್ದಾಣದ ಬಳಿ ದುಷ್ಕಮಿ೯ಗಳು ಎಐಟಿಯುಸಿ ಕಾಮಿ೯ಕ ಸಂಘಟನೆಯ ಖಜಾಂಜಿ ನರೇಂದ್ರ ಸಿಂಗ್ ಎಂಬವರನ್ನು ಹತ್ಯೆಗೈದಿದ್ದಾರೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದಶಿ೯ ಗುರುದಾಸ್ ದಾಸ್ ಗುಪ್ತಾ ಹೇಳಿದ್ದಾರೆ.
ನಾಯಕನ ಹತ್ಯೆಯವನ್ನು ಖಂಡಿಸಿದ ದಾಸ್ ಗುಪ್ತಾ, ತಮ್ಮ ನಾಯಕನ ಹತ್ಯೆ ನಡೆದಿದ್ದರೂ ತಾವು ಮುಷ್ಕರ ಮುಂದುವರಿಸುವುದಾಗಿ ಹೇಳಿದ್ದಾರೆ.
ಯುಪಿಎ ಸಕಾ೯ರದ ಜನವಿರೋಧಿ ನಿಲುವನ್ನು ಖಂಡಿಸಿ ದೇಶದ 11 ಕಾಮಿ೯ಕ ಒಕ್ಕೂಟಗಳು ಎರಡು ದಿನಗಳ (ಫೆ.20,ಫೆ21) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದವು.
ಕಾಮಿ೯ಕ ಸಂಘಟನೆಗಳ ಜತೆಗೆ ವಿಪಕ್ಷ ಎಡರಂಗ, ಕಾಂಗ್ರೆಸ್ ಬೆಂಬಲಿತ ಕಾಮಿ೯ಕ ಸಂಘಟನೆಯಾದ ಐಎನ್ ಟಿಯುಸಿ ಮತ್ತು ಬಿಜೆಪಿ ಬೆಂಬಲಿತ ಸಂಘಟನೆಯಾದ ಬಿಎಂಎಸ್ ಕೂಡಾ ಈ ಮುಷ್ಕರಕ್ಕೆ ಬೆಂಬಲ ನೀಡಿದೆ.