ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಿರಾಟ್ ಕೊಹ್ಲಿಗೆ ಆರ್ ಸಿ ಬಿ ನಾಯಕತ್ವ

ವಿರಾಟ್ ಕೊಹ್ಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂನ ನಾಯಕತ್ವ ಲಭಿಸಿದೆ. ಕಳೆದ ಐಪಿಎಲ್ ನ ಎರಡು...

Rashmi Kasaragodu
Updated On : 20 Feb 2013, 5:41 am
ನವದೆಹಲಿ : ವಿರಾಟ್ ಕೊಹ್ಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂನ ನಾಯಕತ್ವ ಲಭಿಸಿದೆ. ಕಳೆದ ಐಪಿಎಲ್ ನ ಎರಡು ಋತುಗಳಲ್ಲಿ ನ್ಯೂಜಿಲ್ಯಾಂಡ್ ನ ಡೇನಿಯಲ್ ವಿಟ್ಟೋರಿ ಆರ್ ಸಿ ಬಿ ತಂಡದ ನಾಯಕತ್ವವನ್ನು ವಹಿಸಿದ್ದರು.
ವಿರಾಟ್ ಕೊಹ್ಲಿಯನ್ನು ನಮ್ಮ ತಂಡದ ನಾಯಕನಾಗಿ ನೇಮಿಸಲಾಗಿದೆ ಎಂದು ಆರ್ ಸಿ ಬಿ ತಂಡದ ಮಾಲೀಕ ವಿಜಯ್ ಮಲ್ಯ ತಮ್ಮ ವೆಬ್ ಸೈಟ್ ನಲ್ಲಿ ಹೇಳಿದ್ದಾರೆ.  ಅವರ ಕಲಿಯುವ ಉತ್ಸಾಹ, ನಾಯಕತ್ವ ಗುಣ ಹಾಗು ಪ್ರೇರಣಾ ಶಕ್ತಿ  ಎಲ್ಲವೂ ಪ್ರಶ್ನಾತೀತ ಎಂದು ಮಲ್ಯ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.
24ರ ಹರೆಯದಲ್ಲೇ ಅವರು 4 ವಷ೯ಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ಅವರು ಬೆಂಗಳೂರು ಟೀಂನ್ನು ಮುನ್ನಡೆಸಲಿದ್ದು, ಇದು ತಂಡಕ್ಕೆ ಹೆಚ್ಚಿನ ಶಕ್ತಿ ನೀಡಲಿದೆ ಎಂದು ಮಲ್ಯ ಹೇಳಿದ್ದಾರೆ.

Advertisement

Advertisement

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೊಹ್ಲಿ ಇದೊಂದು ಉತ್ತಮ ಅನುಭವ, 2008ರಲ್ಲಿ ಅಂಡರ್ 19 ಟೀಂನ್ನು ಪ್ರತಿನಿಧಿಸಿದ್ದ ನನಗೆ ದೊಡ್ಡ ಆಟಗಾರರಿರುವ ಟೀಂನ್ನು ಪ್ರತಿನಿಧೀಕರಿಸುವ ಗೌರವ ದಕ್ಕಿದೆ. ನನ್ನ ಮೇಲಿನ ವಿಶ್ವಾಸಕ್ಕೆ ನಾನು ತಂಡದ ಮಾಲೀಕರಿಗೆ ನಾನು ಧನ್ಯವಾದ ಹೇಳುತ್ತೇನೆ. ನಮ್ಮ ತಂಡವನ್ನು ಜವಾಬ್ದಾರಿಯಿಂದ ಮುನ್ನಡೆಸಿ, ಉತ್ತಮ ತಂಡವನ್ನಾಗಿ ರೂಪಿಸುವ ಹೊಣೆ ನನ್ನ ಮೇಲಿದೆ ಎಂದು ಹೇಳಿದ್ದಾರೆ.
ಐಪಿಎಲ್ ನ  5 ಋತುಗಳಲ್ಲಿ ಕೊಹ್ಲಿ ಒಟ್ಟು  1639 ರನ್ ಗಳನ್ನು ದಾಖಲಿಸಿದ್ದಾರೆ. ಪ್ರಸ್ತುತ ಆರ್ ಸಿ ಬಿ ತಂಡದ ಪ್ರಕಾರ ಕೊಹ್ಲಿಗೆ ಐಪಿಎಲ್ ನಲ್ಲಿ 77 ಪಂದ್ಯಗಳನ್ನಾಡಿರುವ ಅನುಭವವಿದ್ದು, ಅವರೊಬ್ಬ ಅನುಭವೀ ಆಟಗಾರರಾಗಿದ್ದಾರೆ. ಅಂತಹ ಅನುಭವೀ ಆಟಗಾರರು ಆರ್ ಸಿ ಬಿಗೆ ಅಗತ್ಯವಾಗಿದ್ದು, ಕೊಹ್ಲಿ ಉತ್ತಮವಾಗಿ ಕಾರ್ಯ ನಿವ೯ಹಿಸಲಿದ್ದಾರೆ ಎಂದು ಆರ್ ಸಿ ಬಿ ವಿಶ್ವಾಸ ವ್ಯಕ್ತ ಪಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement