ಸಿಸಿಎಲ್ ಸಂಘಟನಾಕಾರರ ವಿರುದ್ಧ ಗುಡಿಗಿದ ಸಲ್ಮಾನ್
ದೆಹಲಿ: ಹೈದ್ರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ತಮಗೆ ಸೂಕ್ತ ಭದ್ರತೆ ಕಲ್ಪಿಸಿಲ್ಲ ಎಂದು ಬಾಲಿವುಡ್ ನಟ ಸಲ್ಮಾನ್‌ಖಾನ್ ಅವರು ಸಿಸಿಎಲ್ ಆಯೋಜಕರ ವಿರುದ್ಧ ಬುಧವಾರ ಗುಡಿಗಿದ್ದಾರೆ.
ಲಾಲ್ ಬಹದ್ದೂರ್ ಸ್ಟೇಡಿಯಂನಿಂದ ಸಲ್ಮಾನ್ ಖಾನ್ ತಂಗಿದ್ದ ಹೋಟೆಲ್‌ವರೆಗೆ ಅಪರಿಚಿತ ವ್ಯಕ್ತಿಗಳು ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಇದರಿಂದ ಸಲ್ಮಾನ್ ಅವರಿಗೆ ಬೇಸರವುಂಟಾಗಿದೆ. ಬೈಕನಲ್ಲಿ ಹಿಂಬಾಲಿಸಿದ ವ್ಯಕ್ತಿಗಳು ಸಲ್ಮಾನ್ ಅಭಿಮಾನಿಗಳು, ಸಲ್ಮಾನ್ ಅವರ ಗಮನ ಸೆಳೆಯಲು ಅವರ ಕಾರ್‌ನ್ನು ಹಿಂಬಾಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಘಟನಕಾರರು ಹಾಗೂ ಪೊಲೀಸ್ ಇಲಾಖೆ ಬಿಗಿ ಭದ್ರತೆ ನೀಡುವಲ್ಲಿ ವಿಫಲವಾಗಿರುವದಲ್ಲದೇ, ಅಪಘಾತವಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬಂದಿದ್ದರಿಂದ ಸಲ್ಮಾನ್ ಅವರಿಗೆ ಬೇಸರವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.