ಅಮೆರಿಕದಲ್ಲಿ ಶೇ.8.2ರಷ್ಟು ಭಾರತೀಯರು ಕಡು ಬಡವರು
ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದಲ್ಲಿ 3 ಮಿಲಿಯನ್‌ನಷ್ಟು ಅನಿವಾಸಿ ಭಾರತೀಯರು ಬಡತನ ರೇಖೆಗಿಂತ ಕೆಳಗಿನ ಜೀವನ ನಡೆಸುತ್ತಿದ್ದಾರೆ...
ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದಲ್ಲಿ 3 ಮಿಲಿಯನ್‌ನಷ್ಟು ಅನಿವಾಸಿ ಭಾರತೀಯರು ಬಡತನ ರೇಖೆಗಿಂತ ಕೆಳಗಿನ ಜೀವನ ನಡೆಸುತ್ತಿದ್ದಾರೆ ಎಂದರೆ ನಂಬುತ್ತಿರಾ. ಹೌದು ಇತ್ತೀಚೆಗೆ ಅಮೆರಿಕ ನಡೆಸಿದ ಸಮೀಕ್ಷೆ ಪ್ರಕಾರ ಈ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
2007-2012ರಲ್ಲಿ ನಡೆದ ಸಮುದಾಯವಾರು ಜನಗಣತಿ ಸಮೀಕ್ಷೆಯಲ್ಲಿ ಅಮೆರಿಕದ ಶೇ. 42.7 ಹಾಗೂ ಭಾರತದ ಶೇ. 8.2 ರಷ್ಟು ಬಡತನ ರೇಖೆಗಿಂತ ಅಂದರೆ ಅಲ್ಲಿನ ರಾಷ್ಟ್ರೀಯ ತಲಾ ಆದಾಯ ಶೇ. 14.7 ಕ್ಕಿಂತ ಕಡಿಮೆ ಆದಾಯ ಹೊಂದಿದ್ದಾರೆ ಎಂಬುದು ವರದಿಯಿಂದ ತಿಳಿದು ಬಂದಿದೆ.
ಅನಿವಾಸಿ ಜಪಾನಿಯರು ಶೇ. 8.2ರಷ್ಟು ಬಡತನ ರೇಖೆಗಿಂತ ಕೆಳಗಿದ್ದಾರೆ. ಅತಿ ಹೆಚ್ಚು ಕಡು ಬಡವರನ್ನು ಹೊಂದುವ ಮೂಲಕ ಕೊರಿಯಾ(ಶೇ.15.0) ಮತ್ತು ವಿಯೆಟ್ನಾ (14.7) ಮೊದಲ ಸ್ಥಾನದಲ್ಲಿವೆ. ಫಿಲಿಫೈನ್ಸ್ ಶೇ. 5.8ರಷ್ಟು ಬಡವರನ್ನು ಹೊಂದುವ ಮೂಲಕ ಕೊನೆಯ ಸ್ಥಾನದಲ್ಲಿದೆ.
ಪ್ರಮುಖವಾಗಿ ಏಷ್ಯಾದ ರಾಷ್ಟ್ರಗಳ ನಿವಾಸಿಗಳು ವಾಸಿಸುವ 9 ರಾಜ್ಯಗಳಲ್ಲಿ (ಕನೆಕ್ಟಿಕಾ, ದಿಲಾವೆರ್, ಹವಾಯಿ, ಮೇರಿಲ್ಯಾಂಡ್, ನಿವಾದ್, ನ್ಯೂ ಹ್ಯಾಮ್‌ಪರ್, ನ್ಯೂ ಜರ್ಸಿ, ವರ್ಜಿನಿಯಾ ಮತ್ತು ದಕ್ಷಿಣ ಕೆರೋಲಿನಾ) ಶೇ.10ರಷ್ಟು ಜನ ಬಡತನ ರೇಖೆಗಿಂತ ಕೆಳಗೆ ಜೀವನ ಸಾಗಿಸುತ್ತಿದ್ದಾರೆ.
ಅಮೆರಿಕದಲ್ಲಿ ವಾಸಿಸುತ್ತಾರೆ ಎಂಬ ತಕ್ಷಣ ಎಲ್ಲರು ಶ್ರೀಮಂತರು ಎಂಬ ಭಾವನೆ ಈ ವರದಿಯಿಂದ ಸುಳ್ಳಾಗಿದೆ.