ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮದ್ಯದ ದೊರೆ ಮಲ್ಯಗೆ ಸಮನ್ಸ್ ಜಾರಿ

ನೌಕರರ ಸಂಬಳದಿಂದ ಕಡಿತಮಾಡಿದ ತೆರಿಗೆ(ಟಿಡಿಎಸ್) ಹಣವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಕಿಂಗ್‌ಫಿಶರ್ ಏರಲೈನ್ಸ್‌ನ ಮಾಲೀಕ...

Parashurama
Updated On : 21 Feb 2013, 4:14 am

ಬೆಂಗಳೂರು: ನೌಕರರ ಸಂಬಳದಿಂದ ಕಡಿತಮಾಡಿದ ತೆರಿಗೆ(ಟಿಡಿಎಸ್) ಹಣವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಕಿಂಗ್‌ಫಿಶರ್ ಏರಲೈನ್ಸ್‌ನ ಮಾಲೀಕ ಹಾಗೂ ಮದ್ಯದ ದೊರೆ ವಿಜಯ ಮಲ್ಯ ಅವರಿಗೆ ವಿಶೇಷ ನ್ಯಾಯಾಲಯ ಗುರುವಾರ ಸಮನ್ಸ್ ಜಾರಿಗೊಳಿಸಿದೆ.

2009-10ರಲ್ಲಿ ಕಿಂಗ್‌ಫಿಶರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸಂಬಳದಲ್ಲಿ ರು. 74.94 ಕೋಟಿ ತೆರಿಗೆ ಹಣ ಕಡಿತಗೊಳಿಸಿ ಅದನ್ನು ಇಲಾಖೆಗೆ ಸಂದಾಯ ಮಾಡಲು ವಿಫಲರಾಗಿದ್ದಾರೆ ಎಂದು 1962ರ 276ಬಿ, 278ಬಿ ಐಟಿ ಕಾಯ್ದೆ ಅಡಿ ಕೇಂದ್ರ ಆದಾಯ ತೆರಿಗೆ ಇಲಾಖೆ ವಿಜಯ ಮಲ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು.

ಪ್ರಕರಣ ಸಂಬಂಧ ಬಾಕಿ ಇರುವ 74.94 ಕೋಟಿ ರುಪಾಯಿಯನ್ನು ಆದಾಯ ತೆರಿಗೆ ಇಲಾಖೆಗೆ ಸಂದಾಯ ಮಾಡುವಂತೆ ಕೋರ್ಟ್ ಕಿಂಗ್‌ಫಿಶರ್ ಸಂಸ್ಥೆಗೆ ಸೂಚಿಸಿದೆ. ನಿಗದಿತ ಅವಧಿಯೊಳಗೆ ಆದಾಯ ತೆರಿಗೆ ಇಲಾಖೆಗೆ ಟಿಟಿಎಸ್ ಸಲ್ಲಿಸದ ವಿಜಯ ಮಲ್ಯ ಅವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

276ರ ಕಾಯ್ದೆ ಪ್ರಕಾರ ನಿಗದಿತ ಅವಧಿಯೊಳೆಗ ತೆರಿಗೆ ಪಾವತಿಸದಿದ್ದರೆ, ಕನಿಷ್ಠ ಮೂರು ತಿಂಗಳು ಹಾಗೂ ಅತಿ ಹೆಚ್ಚು ಅಂದರೆ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ.

ಡಿಸೆಂಬರ್ 3, 2012ರ ಕಂಪನಿಯ ವರದಿಯ ಪ್ರಕಾರ, ಕಿಂಗ್‌ಫಿಶರ್ ಒಟ್ಟು ರು.755 .17 ಕೋಟಿ ನಷ್ಟ ಅನುಭವಿಸಿದೆ. ಇದೀಗ ಕೋರ್ಟ್ ತೆರಿಗೆ ಪಾವತಿಸುವಂತೆ ಸೂಚಿಸಿರುವುದರಿಂದ ಮದ್ಯದ ದೊರೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement