ಶಿಂಧೆ ವಿಷಾದದ ಬದಲು ಕ್ಷಮೆಯಾಚಿಸಲಿ: ಆರ್ಎಸ್ಎಸ್
ನವದೆಹಲಿ: ಕೇಂದ್ರ ಗೃಹ ಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರು ತಾವು ನೀಡಿದ್ದ ಹಿಂದೂ ಭಯೋತ್ಪಾದನೆ ಎಂಬ ಹೇಳಿಕೆಗೆ ಬರಿ ವಿಷಾದ ವ್ಯಕ್ತಪಡಿಸಿದ್ದಾರೆ ಹೊರತು ಕ್ಷಮೆಯಾಚಿಸಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ್ ಸಂಘವನ್ನು(ಆರ್ಎಸ್ಎಸ್) ಗುರುವಾರ ಹೇಳಿದೆ. ಈ ಮಧ್ಯೆ, ಶಿಂಧೆ ಅವರ ವಿಷಾದ ವ್ಯಕ್ತಪಡಿಸಿರುವುದನ್ನು ಬಿಜೆಪಿ ಸ್ವಾಗತಿಸಿದೆ.
ನಿನ್ನೆ ಶಿಂಧೆ ಅವರು ತಮ್ಮ ಹೇಳಿಕೆ ಉದ್ದೇಶ ಪೂರ್ವಕವಾಗಿಲ್ಲ. ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದ್ದರು. ಅಲ್ಲದೆ ಈ ಸಂಬಂಧ ಬಿಜೆಯಲ್ಲಿ ಕ್ಷಮೆಯಾಚಿಸಿದ್ದರು. ಆದರೆ ಇದರಿಂದ ತೃಪ್ತನಾಗದ ಆರ್ಎಸ್ಎಸ್, ಶಿಂಧೆ ಅವರ ವಿಷಾದ ತಮಗೆ ಬೇಕಾಗಿಲ್ಲ, ಶಿಂಧೆ ಆರ್ಎಸ್ಎಸ್ ಸಂಘಟನೆಯನ್ನು ಭಯೋತ್ಪಾದನೆಗೆ ಹೋಲಿಸಿದ್ದಾರೆ. ಆದ್ದರಿಂದ ಅವರು ಬಹಿರಂಗವಾಗಿ ಆರ್ಎಸ್ಎಸ್ ಸಂಘಟನೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಆರ್ಎಸ್ಎಸ್ ವಕ್ತಾರ ರಾಮ್ ಮಹಾದೇವ್ ಅವರು ಟ್ವೀಟರ್ನಲ್ಲಿ ಆಗ್ರಹಿಸಿದ್ದಾರೆ.