ಈಗಿನ ಸುದ್ದಿ

ಹೈದರಾಬಾದ್‌ನಲ್ಲಿ ಸರಣಿ ಸ್ಫೋಟ; 22ಸಾವು

ಇಲ್ಲಿನ ದಿಲ್‌ಸುಖ್‌ನಗರದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟದಲ್ಲಿ 15 ಜನ ಸಾವಿಗೀಡಾಗಿದ್ದಾರೆ.

ಹೈದರಾಬಾದ್: ಇಲ್ಲಿನ ದಿಲ್‌ಸುಖ್‌ನಗರದಲ್ಲಿ ಗುರುವಾರ ಸಂಜೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ 15 ಜನ ಸಾವಿಗೀಡಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ನಗರದ ಜನನಿಬಿಡ ಪ್ರದೇಶವಾದ ದಿಲ್‌ಸುಖ್ ನಗರ ಬಸ್‌ಸ್ಟ್ಯಾಂಡ್ ಬಳಿ ಹಾಗೂ ಸಮೀಪದ ವೆಂಕಟಾದ್ರಿ ಚಿತ್ರಮಂದಿರದ ಬಳಿ ಏಕಕಾಲಕ್ಕೆ ಅವಳಿ ಸ್ಫೋಟ ಸಂಭವಿಸಿದೆ. ಇದಾದ ಬಳಿಕ ಪಕ್ಕದಲೇ ಇರುವ ಕೊನಾರ್ಕ್ ಚಿತ್ರಮಂದಿರ, ಸಾಯಿಬಾಬಾ ದೇವಸ್ಥಾನದ ಬಳಿ ಒಂದಾದರೊಂದರಂತೆ ಒಟ್ಟು 5 ಸ್ಫೋಟಗಳು ಸಂಭವಿಸಿದೆ.

ಸ್ಫೋಟಕಗಳನ್ನು ಸ್ಕೂಟರ್ ಹಾಗೂ ಸೈಕಲ್‌ನಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ. ಸ್ಫೋಟದ ತೀವ್ರತೆ ಹೆಚ್ಚಿದ್ದರ ಹಿನ್ನೆಲೆಯಲ್ಲಿ ಹಲವರಿಗೆ ಗಾಯಗಳಗಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಉಸ್ಮಾನಾಬಾದ್ ಆಸ್ಪತ್ರೆಗೆ ಸೇರಿಸಲಾಗಿದೆ.

ಸ್ಪೋಟದ ಕಾರಣ ಇವರೆಗೆ ತಿಳಿದುಬಂದಿಲ್ಲ. ಸ್ಫೋಟಗೊಂಡ ಸ್ಥಳದಲ್ಲಿ ಬಾಂಬ್ ನಿಷ್ಕೃಯ ದಳ ಪರಿಶೀಲನೆ ನಡೆಸುತ್ತಿದೆ. ನಗರದಲ್ಲಿ ಸರಣಿ ಸ್ಫೋಟಗೊಂಡ ಬಗ್ಗೆ ಇವರೆಗೆ ಯಾವುದೇ ಅಧಿಕೃ ಹೇಳಿಕೆ ಪೊಲೀಸ್ ಅಧಿಕಾರಿ ಬಂದಿಲ್ಲ.

ಸ್ಫೋಟದ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹೈದಾರಾಬಾದ್‌ನಲ್ಲಿ ಸರಣಿ ಸ್ಫೋಟ ವರದಿಯಾಗುತ್ತಿದಂತೆ ದೇಶದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ, ನವದೆಹಲಿ, ಚೆನೈ ಸೇರಿದಂತೆ ಹಲವು ಮಹಾನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್