ಬಂಡಾರಾ ಅತ್ಯಾಚಾರ ಪ್ರಕರಣ; ಶಾಲಾ ಹೆಡ್ಮಾಸ್ತರ್ ಅಮಾನತು
ಮಹಾರಾಷ್ಟ್ರದ ಬಂಡಾರಾ ಜಿಲ್ಲೆಯಲ್ಲಿ 8 ದಿನಗಳ ಹಿಂದೆ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ
ಬಂಡಾರಾ: ಮಹಾರಾಷ್ಟ್ರದ ಬಂಡಾರಾ ಜಿಲ್ಲೆಯಲ್ಲಿ 8 ದಿನಗಳ ಹಿಂದೆ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ನಡೆದಿದ್ದು, ಈ ಬಾಲಕಿಯರು ಕಲಿಯುತ್ತಿದ್ದ ಶಾಲೆಯ ಮುಖ್ಯೋಪಧ್ಯಾಯರನ್ನು ಇದೀಗ ಅಮಾನತುಗೊಳಿಸಲಾಗಿದೆ.
ಫೆ.14ರಂದು ಮೂವರು ಸಹೋದರಿಯರು ಕಾಣೆಯಾಗಿದ್ದು, ಈ ಬಗ್ಗೆ ಬಾಲಕಿಯರ ಕುಟುಂಬ ಮತ್ತು ಪೊಲೀಸರಿಗೆ ಮಾಹಿತಿ ನೀಡದೇ ಇದ್ದುದಕ್ಕೆ ಮುಖ್ಯೋಪಧ್ಯಾಯರನ್ನು ಅಮಾನತುಗೊಳಿಸಲಾಗಿದೆ.
ಅತ್ಯಾಚಾರಕ್ಕೊಳಗಾದ ಮೂವರು ಬಾಲಕಿಯರಲ್ಲಿ ಇಬ್ಬರು ಬಾಲಕಿಯರು ಶಾಲಾ ವಿದ್ಯಾರ್ಥಿನಿಗಳಾಗಿದ್ದರು. ಈ ಇಬ್ಬರು ಬಾಲಕಿಯರು ಮಧ್ಯಾಹ್ನದ ಊಟದ ಹೊತ್ತಿಗೆ ನಾಪತ್ತೆಯಾಗಿದ್ದು, ಅವರ ಶಾಲಾ ಬ್ಯಾಗ್ ತರಗತಿಯಲ್ಲೇ ಇತ್ತು.
ಈ ಹುಡುಗಿಯರು ನಾಪತ್ತೆಯಾಗಿದ್ದರೂ, ಶಾಲಾ ಮುಖ್ಯೋಪಧ್ಯಾಯರು ಈ ವಿಷಯವನ್ನು ಬಾಲಕಿಯರ ಕುಟುಂಬದ ಗಮನಕ್ಕೆ ತಂದಿರಲಿಲ್ಲ.
ಅಪ್ರಾಪ್ತ ಬಾಲಕಿಯರಾದ ಮೂವರು ಸಹೋದರಿಯರನ್ನು ಅತ್ಯಾಚಾರವೆಸಗಿ, ಹತ್ಯೆಗೈದು ನಂತರ ಬಾವಿಗೆ ತಳ್ಳಲಾಗಿತ್ತು. ಈ ಬಾಲಕಿಯರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿತ್ತು.