ಗ್ಯಾಂಗ್ ರೇಪ್ ಪ್ರಕರಣ: ದೆಹಲಿ ಪೊಲೀಸರಿಗೆ ಕ್ಲೀನ್ ಚಿಟ್
ನವದೆಹಲಿ: ದೆಹಲಿಯಲ್ಲಿ ನಡೆದೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ಶನಿವಾರ ಕ್ಲೀನ್ ಚಿಟ್ ನೀಡಲಾಗಿದೆ.
ಗ್ಯಾಂಗ್ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ನ್ಯಾಯಾಮೂರ್ತಿ ಉಷಾ ಮೆಹ್ರಾ ಸಮಿತಿ ದೆಹಲಿ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದೆ.
ದೆಹಲಿ ಪೊಲೀಸರಿಗೂ ಮತ್ತು ಸಾರಿಗೆ ಇಲಾಖೆ ನಡುವೆ ಸಹಯೋಗದ ಕೊರತೆಯಿದೆ ಎಂದು ಸಮಿತಿ ಹೇಳಿದೆ.
ಗೃಹ ಸಚಿವಾಲಯಕ್ಕೆ ನೀಡಿರುವ ಉಷಾ ಮೆಹ್ರಾ ಸಮಿತಿ ಮಾಡಿರುವ ಶಿಫಾರಸ್ಸುಗಳನ್ನು ಕೂಡಲೇ ಕಾರ್ಯಗತಗೊಳಿಸಲಾಗುವುದು ಎಂದು ಕಾನೂನು ಸಚಿವ ಅಶ್ವಾನಿ ಕುಮಾರ್ ಹೇಳಿದ್ದಾರೆ.