ದಲಿತರಿಗೂ ವೇದಾಧ್ಯಯನ ಕಲ್ಪಿಸಲಿದೆ ಮೋದಿ ಸರ್ಕಾರ
ಬ್ರಾಹ್ಮಣೇತರರಿಗೂ ಹಿಂದೂ ಶಾಸ್ತ್ರೋಕ್ತ ವಿಧಿ ವಿಧಾನಗಳ ಕಲಿಕೆಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ನರೇಂದ್ರ ಮೋದಿ...
ಅಹಮದಾಬಾದ್: ಬ್ರಾಹ್ಮಣೇತರರಿಗೂ ಹಿಂದೂ ಶಾಸ್ತ್ರೋಕ್ತ ವಿಧಿ ವಿಧಾನಗಳ ಕಲಿಕೆಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರ ಹೊಸ ಭರವಸೆ ನೀಡಿದೆ.
ಗುಜರಾತ್ನಲ್ಲಿ ಜಾಡಮಾಲಿಗಳಾಗಿರುವ ವ್ಯಕ್ತಿಗಳಿಗೆ ಸೋಲಾಭಗವತ್ ವಿದ್ಯಾಪೀಠ್ ಮತ್ತು ಸೋಮ್ನಾಥ್ ಸಂಸ್ಕೃತ ವಿಶ್ವವಿದ್ಯಾನಿಲಯದಲ್ಲಿ ವೇದಾಧ್ಯಯನ ತರಬೇತಿ ನೀಡಲಾಗುವುದು ಎಂದು ಮೋದಿ ಸರ್ಕಾರ ಹೇಳಿದೆ.
ಈ ಯೋಜನೆಗಾಗಿ ಸರ್ಕಾರವು 2013-14ರ ಬಜೆಟ್ನಲ್ಲಿ ರು. 22.50 ಲಕ್ಷ ಮೀಸಲಿರಿಸಲು ಸಾಮಾಜಿಕ ನ್ಯಾಯ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿದೆ.
ಈ ಯೋಜನೆಯಿಂದಾಗಿ ಹಿಂದುಳಿದ ವರ್ಗದ ಜನರೂ ಪುರೋಹಿತರಾಗಿ, ಮದುವೆ ಹಾಗು ಪೂಜಾ ಕಾರ್ಯಗಳನ್ನು ನಡೆಸಿಕೊಡ ಬಹುದಾಗಿದೆ.
ಮೋದಿ ಕೂಡಾ ಹಿಂದುಳಿದ ಸಮುದಾಯಕ್ಕೆ ಸೇರಿರುವುದರಿಂದ ಅವರು ಈ ಯೋಜನೆ ಆರಂಭಿಸಿದರೆ ಅದಕ್ಕೆ ಜನರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಲಿದೆ.