ನಿರುದ್ಯೋಗ ನಿರ್ಮೂಲನೆಗೆ ಬಿಎಸ್ಪಿ ವಿಫಲ: ಅಖಿಲೇಶ್
ಲಕ್ನೋ: ಬಹುಜನ ಸಮಾಜ ಪಕ್ಷ ಆಡಳಿತದಲ್ಲಿರಬೇಕಾದರೆ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶನಿವಾರ ಹೇಳಿದ್ದಾರೆ.
ಬಿಎಸ್ಪಿ ಆಡಳಿತದಲ್ಲಿರಬೇಕಾದರೆ ನಿರುದ್ಯೋಗಿಗಳಿಗೆ ಅವಕಾಶ ಕಲ್ಪಿಸುವುದರ ಬದಲು, ಭ್ರಷ್ಟಾಚಾರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿತ್ತು ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ, ನಿರುದ್ಯೋಗಿಗಳಿಗೆ ಹೆಚ್ಚು ಉದ್ಯೋಗವಕಾಶ ಕಲ್ಪಿಸಿದ್ದು, ನಿರುದ್ಯೋಗ ನಿಗ್ರಹಕ್ಕೆ ಪಣ ತೊಟ್ಟಿದೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಬಿಎಸ್ಪಿ ಅಧಿಕಾರದಲ್ಲಿದ್ದಾಗ ಉದ್ಯಾನ, ಸ್ಮಾರಕಗಳಿಗೆ ಕೋಟಿಗಟ್ಟೆಲೆ ಹಣ ವ್ಯಯಿಸಿರುವುದರ ಜೊತೆಗೆ ಸರ್ಕಾರದ ಹಣವನ್ನು ಲೂಟಿ ಮಾಡಿದೆ ಎಂದು ಅವರು ಆಪಾದಿಸಿದ್ದಾರೆ.
ಸಮಾಜವಾದಿ ನೇತೃತ್ವದ ಆಡಳಿತ ಪಕ್ಷ ಎಲ್ಲಾ ನಿರುದ್ಯೋಗಳಿಗೆ ಉದ್ಯೋಗ ಸಿಗುವ ತನಕ ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.