ಸ್ಫೋಟಕ್ಕೆ ಸಾಯಿಬಾಬಾ ಮಂದಿರ ಟಾರ್ಗೆಟ್ ಆಗಿತ್ತೆ?
ಹೈದ್ರಾಬಾದ್ದ ದಿಲ್ಸುಖ್ನಗರದಲ್ಲಿ ಬಾಂಬ್ ಸ್ಫೋಟ ಮಾಡಿದ ಉಗ್ರರಿಗೆ ಸಾಯಿ ಬಾಬಾ ಮಂದಿರವೇ...
ಹೈದ್ರಾಬಾದ್: ಹೈದ್ರಾಬಾದ್ದ ದಿಲ್ಸುಖ್ನಗರದಲ್ಲಿ ಬಾಂಬ್ ಸ್ಫೋಟ ಮಾಡಿದ ಉಗ್ರರಿಗೆ ಸಾಯಿ ಬಾಬಾ ಮಂದಿರವೇ ಮೊದಲನೆಯ ಟಾರ್ಗೆಟ್ ಆಗಿತ್ತು ಎಂದು
ಹೇಳಲಾಗುತ್ತಿದೆ. ಸಾಯಿ ಬಾಬಾ ಮಂದಿರಕ್ಕೆ ಬಾಂಬ್ ಹಾಕಲು ತೀರ್ಮಾನಿಸಿದ್ದ ಉಗ್ರರು ಕೊನೆ ಗಳಿಗೆಯಲ್ಲಿ ದಿಲ್ಸುಖ್ನಗರದ ಜನ ನಿಬಿಡ ಪ್ರದೇಶದಲ್ಲಿ ಸ್ಫೋಟ ನಡೆಸಿದ್ದರು.
ಬಾಂಬ್ ಸ್ಫೋಟ ಸಂಭವಿಸಿದ ಕೊನಾರ್ಕ್ ಥಿಯೇಟರ್ ಸಾಯಿ ಮಂದಿರದಿಂದ 300 ಕಿ.ಮೀ ದೂರದಲ್ಲಿದೆ.
ಬಲ್ಲಮೂಲಗಳ ಪ್ರಕಾರ ಉಗ್ರರು ಸಾಯಿ ಬಾಬಾ ಮಂದಿರವನ್ನೇ ಟಾರ್ಗೆಟ್ ಮಾಡಿದ್ದರು. ಆದರೆ ಆ ವೇಳೆ ಹೈದ್ರಾಬಾದ್ ಪೊಲೀಸ್ ಕಮಿಷನರ್ ಅನುರಾಗ್ ಶರ್ಮಾ ಅವರು ಮಂದಿರಲ್ಲಿದ್ದ ಕಾರಣ ಉಗ್ರರು ದಿಲ್ಸುಖ್ನಗರದಲ್ಲಿ ಬಾಂಬ್ ಸ್ಫೋಟ ಮಾಡಿದ್ದಾರೆ.
ಗುರುವಾರ ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಪೂಜೆಯಿರುವ ಕಾರಣ ಭಕ್ತಾದಿಗಳ ಸಂಖ್ಯೆಯೂ ಜಾಸ್ತಿ ಇರುತ್ತಿತ್ತು. ಈ ಸಂದರ್ಭದಲ್ಲೇ ಬಾಂಬ್ ಸ್ಫೋಟ ಮಾಡಲು ಉಗ್ರರು ತಯಾರಿ ನಡೆಸಿದ್ದರು ಎಂದು ಹೇಳಲಾಗುತ್ತಿದೆ.
ಈ ಹಿಂದೆಯೂ ಸಾಯಿ ಮಂದಿರವನ್ನು ಉಗ್ರರು ಟಾರ್ಗೆಟ್ ಮಾಡಿದ್ದರು. ನವೆಂಬರ್ 2002ರಂದು ಉಗ್ರರು ಸ್ಕೂಟರ್ನಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ಬಳಸಿ ಬಾಂಬ್ ಸ್ಫೋಟ ನಡೆಸಿದ್ದು, ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದರು.