ಹೈ ಸ್ಫೋಟ: ನಾಳೆ ಹೈದರಾಬಾದ್ಗೆ ಪ್ರಧಾನಿ ಭೇಟಿ
ನವದೆಹಲಿ: ಹೈದರಾಬಾದ್ನ ದಿಲ್ಖುಸ್ ನಗರದಲ್ಲಿ ಗುರುವಾರ ಸಂಭವಿಸಿದ ಅವಳಿ ಬಾಂಬ್ ಸ್ಫೋಟದ ಸಂಬಂಧ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಭಾನುವಾರ ಹೈದರಾಬಾದ್ಗೆ ಭೇಟಿ ನೀಡಲಿದ್ದಾರೆ.
ನಾಳೆ ಹೈದರಾಬಾದ್ಗೆ ತೆರಳುತ್ತಿರುವ ಪ್ರಧಾನಿ ಸಿಂಗ್ ಅವರು, ಬೆಳಗ್ಗೆ 11 ಗಂಟೆಗೆ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ ನಂತರ ಯಶೋಧಾ ಹಾಗೂ ಕೆಆರ್ ಆಸ್ಪತ್ರೆಗೆ ತೆರಳಿ ಗಾಯಾಳುಗಳಿಗೆ ಸಾಂತ್ವಾನ ಹೇಳಲಿದ್ದಾರೆ.
ಮುತ್ತಿನ ನಗರಿ ಎಂದೇ ವಿಶ್ವಾದ್ಯಂತ ಖ್ಯಾತಿ ಪಡೆದಿರುವ ಹೈದರಾಬಾದ್ನಲ್ಲಿ ಕಳೆದ ಗುರುವಾರ ಸಂಜೆ 7 ಗಂಟೆಯ ಸುಮಾರಿಗೆ ಎರಡು ಪ್ರಬಲ ಬಾಂಬ್ ಸ್ಫೋಟಗೊಂಡಿದ್ದವು. ಈ ದುರಂತದಲ್ಲಿ 16 ಮಂದಿ ಅಸುನೀಗಿ 119 ಮಂದಿ ಗಾಯಗೊಂಡಿದ್ದರು.