ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಹೈ ಸ್ಫೋಟ ಪ್ರಕರಣ ಶೀಘ್ರವೇ ಬೇಧಿಸಲಾಗುವುದು: ಆಂಧ್ರ ಗೃಹ ಸಚಿವೆ

ದಿಲ್‌ಸುಖ್‌ನಗರದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಮುಂದುವರಿದಿದ್ದು...

Rashmi Kasaragodu
Updated On : 23 Feb 2013, 5:37 am

ಹೈದ್ರಾಬಾದ್: ದಿಲ್‌ಸುಖ್‌ನಗರದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರು ಶೀಘ್ರವೇ ಈ ಪ್ರಕರಣವನ್ನು ಬೇಧಿಸಲಿದ್ದಾರೆ ಎಂದು ಆಂಧ್ರ ಪ್ರದೇಶದ ಗೃಹ ಸಚಿವ ಸಬಿತಾ ಇಂದ್ರಾ ರೆಡ್ಡಿ ಹೇಳಿದ್ದಾರೆ.

ಬಾಂಬ್ ಸ್ಫೋಟ ಸಂಭವಿಸಿದ 24ಗಂಟೆಗಳಲ್ಲಿಯೇ ಈ ಕೃತ್ಯದ ಬಗ್ಗೆ ಹಲವಾರು ಸುಳಿವುಗಳು ಲಭ್ಯವಾಗಿದ್ದು, ಪೊಲೀಸರು ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಲಿದ್ದಾರೆ ಎಂದು ರೆಡ್ಡಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಅದೇ ವೇಳೆ ಈ ಕೃತ್ಯದಲ್ಲಿ ಭಾಗಿಯಾಗಿರುವವರಿಗೆ ಸರ್ಕಾರ ಆದಷ್ಟು ಬೇಗ ಶಿಕ್ಷೆ ವಿಧಿಸಲಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಪ್ರಕರಣವನ್ನು ಬೇಧಿಸುವುದಕ್ಕಾಗಿ ಹೈದ್ರಾಬಾದ್ ಪೊಲೀಸರು  15 ತಂಡಗಳನ್ನು ರಚಿಸಿದ್ದು, ಪ್ರತಿಯೊಂದು ತಂಡದಲ್ಲೂ 10ರಿಂದ 15 ಅಧಿಕಾರಿಗಳಿದ್ದಾರೆ.

ಅದೇ ವೇಳೆ ಅಪರಾಧ ತನಿಖಾ ದಳ (ಸಿಬಿಐ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ  (ಎನ್‌ಐಎ) ಮತ್ತು ಕೇಂದ್ರದ ಇನ್ನಿತರ ತನಿಖಾ ಸಂಸ್ಥೆಗಳು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿವೆ ಎಂದು ರೆಡ್ಡಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement