ಕೇಸರಿ ಭಯೋತ್ಪಾದನೆ ಹೇಳಿಕೆ ಬಗ್ಗೆ ಖೇದ ವ್ಯಕ್ತ ಪಡಿಸಿದ ಶಿಂದೆ
ಬಿಜೆಪಿ ದೇಶದಲ್ಲಿ ಕೇಸರಿ ಭಯೋತ್ಪಾದನೆ ಮಾಡುತ್ತಿದೆ ಎಂದು ಹೇಳಿದ್ದ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ...
ನವದೆಹಲಿ: ಬಿಜೆಪಿ ದೇಶದಲ್ಲಿ ಕೇಸರಿ ಭಯೋತ್ಪಾದನೆ ಮಾಡುತ್ತಿದೆ ಎಂದು ಹೇಳಿದ್ದ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ತಮ್ಮ ಹೇಳಿಕೆಯ ಬಗ್ಗೆ ಖೇದ ವ್ಯಕ್ತ ಪಡಿಸಿದ್ದಾರೆ. ಆದಾಗ್ಯೂ ತಮ್ಮ ಹೇಳಿಕೆಯ ಬಗ್ಗೆ ಅವರು ಕ್ಷಮೆ ಕೇಳಲಿಲ್ಲ.
ಆದರೆ ಶಿಂದೆ ತಮ್ಮ ಹೇಳಿಕೆಗೆ ಖೇದ ವ್ಯಕ್ತ ಪಡಿಸಿದಕ್ಕೆ ಬಿಜೆಪಿ ತೃಪ್ತವಾಗಿದೆ. ಶಿಂದೆ ಕೇಸರಿ ಭಯೋತ್ಪಾದನೆ ಪದ ಬಳಸಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ಬಿಜೆಪಿ ಒತ್ತಾಯಿಸಿತ್ತು.
ಅವರು ತಮ್ಮ ಹೇಳಿಕೆಯ ಬಗ್ಗೆ ಖೇದ ವ್ಯಕ್ತ ಪಡಿಸಿದ್ದಾರೆ ನಿಜ ಆದರೆ ಒಮ್ಮೆ ಮಾತು ಆಡಿದರೆ ಅದನ್ನು ವಾಪಾಸ್ ತೆಗೆದುಕೊಳ್ಳುವಂತಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್ ನಾಥ್ ಹೇಳಿದ್ದಾರೆ.
ಸಿಎನ್ಎನ್-ಐಬಿಎನ್ ಕಾರ್ಯಕ್ರಮವೊಂದರಲ್ಲಿ ಶಿಂದೆ ಅವರು ತಮ್ಮ ಹೇಳಿಕೆಯ ಬಗ್ಗೆ ಖೇದ ವ್ಯಕ್ತಪಡಿಸಿರುವ ವಿಚಾರವನ್ನು ಕೇಳಿದಾಗ ಕಮಲ್ನಾಥ್ ಈ ರೀತಿ ಉತ್ತರಿಸಿದ್ದಾರೆ.
ಜೈಪುರದಲ್ಲಿ ನಡೆದ ಕಾಂಗ್ರೆಸ್ ಸಭೆಯೊಂದರಲ್ಲಿ ಮಾತನಾಡಿದ ಶಿಂದೆ ಬಿಜೆಪಿ ತಮ್ಮ ಶಿಬಿರಗಳಲ್ಲಿ ಕೇಸರಿ ಭಯತ್ಪಾನೆ ನಡೆಸುತ್ತಿದೆ ಎಂದು ಆರೋಪಿಸಿದ್ದರು.
ಆದಾಗ್ಯೂ, ಶಿಂದೆಯವರು ಬಿಜೆಪಿ ಎಂಬ ಪದ ಬಳಸಿದ್ದು, ಆದರೆ ಅವರು ಯಾವುದೇ ರಾಜಕೀಯ ಸಂಸ್ಥೆ ಎಂದು ಉದ್ದೇಶಿಸಿಲ್ಲ ಎಂದು ಕಮಲ್ನಾಥ್ ಸ್ಪಷ್ಟನೆ ನೀಡಿದ್ದಾರೆ.