ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗುಜರಾತ್ ಬಿಜೆಪಿ ಶಾಸಕರಿಗಿನ್ನು ಮೋದಿ App ಕಡ್ಡಾಯ

ಗುಜರಾತ್‌ನ ಬಿಜೆಪಿ ಶಾಸಕರಿಗೆ, ಸಚಿವರಿಗೆ ಹಾಗು ಇನ್ನಿತರ ಹಿರಿಯ ನಾಯಕರು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ...

Rashmi Kasaragodu
Updated On : 24 Feb 2013, 4:25 am

ಅಹಮದಾಬಾದ್: ಗುಜರಾತ್‌ನ  ಬಿಜೆಪಿ ಶಾಸಕರಿಗೆ, ಸಚಿವರಿಗೆ ಹಾಗು ಇನ್ನಿತರ ಹಿರಿಯ ನಾಯಕರು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಗುಜರಾತ್ ಸಿಎಂ ನರೇಂದ್ರ ಮೋದಿ ಅವರ ಮೊಬೈಲ್ ಆ್ಯಪ್ಲಿಕೇಷನ್ (ಮೊಬೈಲ್ App) ಕಡ್ಡಾಯವಾಗಿ ಬಳಸಬೇಕು.

ಸಿಎಂ ಮೋದಿ ಅವರ ಅಪ್‌ಡೇಟ್‌ಗಳನ್ನು ಪಡೆಯಲು ಎಲ್ಲ ಶಾಸಕರು ಮೋದಿ ಆ್ಯಪ್‌ನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ.

ಚರೋಡಿಯ ಎಸ್‌ಜಿವಿಪಿಯಲ್ಲಿ ಬಿಜೆಪಿ ಶಾಸಕರಿಗೆ ಮೂರು ದಿನಗಳ ವರ್ಕ್‌ಶಾಪ್ ನಡೆಸಲಾಗಿತ್ತು. ಇದರಲ್ಲಿ ನೀವು ಮೋದಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದೀರಾ? ಎಂದು ಬಿಜೆಪಿ ಐಟಿ ಟೀಂ ಕೇಳಿದಾಗ ಶಾಸಕರಿಗೆ ಅಚ್ಚರಿಯಾಗಿತ್ತು.

ಈ ವರ್ಕ್‌ಶಾಪ್‌ನಲ್ಲಿ ಮೋದಿ Appನ ಬಗ್ಗೆ ಶಾಸಕರಿಗೆ ತಿಳಿಸಲಾಗಿದ್ದು, ಅದನ್ನು ಆಪರೇಟ್ ಮಾಡುವ ವಿಧಾನವನ್ನೂ ಹೇಳಿಕೊಡಲಾಗಿದೆ.

ಈ Appನ ಮೂಲಕ ಮೋದಿಯವರ ಎಲ್ಲ ಕಾರ್ಯ ಚಟುವಟಿಕೆಗಳು ಕಾರ್ಯಕರ್ತಕರಿಗೆ ತಿಳಿಯಪಡಿಸುವುದು ಉದ್ದೇಶವಾಗಿದ್ದು, ಎಲ್ಲ ಶಾಸಕರು ಈ Appನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement