ಬೆಂಗಳೂರು ಜೈಲಿನಲ್ಲಿರುವ ಲಷ್ಕರೆ ಉಗ್ರನ ವಿಚಾರಣೆ
ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿನ ಕೆಲವು ಪ್ರಮುಖ ರಾಜಕಾರಣಿ ಹಾಗು ಪತ್ರಕರ್ತರನ್ನು...
ಬೆಂಗಳೂರು: ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿನ ಕೆಲವು ಪ್ರಮುಖ ರಾಜಕಾರಣಿ ಹಾಗು ಪತ್ರಕರ್ತರನ್ನು ಹತ್ಯೆಗೈಯ್ಯಲು ಸಂಚು ರೂಪಿಸಿ ಸೆಪ್ಟಂಬರ್ 2012ರಲ್ಲಿ ಬಂಧನಕ್ಕೊಳಾಗಿರುವ ಲಷ್ಕರೆ ತೊಯ್ಬಾ ಉಗ್ರ ಸಂಘಟನೆಯ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ ಸೋಮವಾರ ವಿಚಾರಣೆಗೊಳಪಡಿಸಿದೆ.
ಬಂಧನಕ್ಕೊಳಗಾದ 15 ಆರೋಪಿಗಳ ಪೈಕಿ ಲಷ್ಕರೆ ಉಗ್ರ ಒಬೈದ್ ಉರ್ ರೆಹಮಾನ್‌ನ್ನು ತನಿಖಾ ದಳ ವಿಚಾರಣೆಗೊಳಪಡಿಸಿದೆ.
ಬೆಂಗಳೂರಿನ ಜೈಲಲ್ಲಿರುವ 12 ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ), ಎನ್ ಐ ಎ ವಿಶೇಷ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿತ್ತು.
ರಾಷ್ಟ್ರೀಯ ತನಿಖಾ ದಳದ ಸದಸ್ಯರು ಶನಿವಾರ ಬೆಂಗಳೂರಿಗೆ ಆಗಮಿಸಿದ್ದು, ಹೈದ್ರಾಬಾದ್ ಸ್ಫೋಟದಲ್ಲಿ ಒಬೈದ್ ಉರ್ ರೆಹಮಾನ್‌ಗೆ ಸಂಬಂಧವಿದೆಯೇ? ಎಂಬುದರ ಬಗ್ಗೆ ಭಾನುವಾರ ವಿಚಾರಣೆ ನಡೆಸಿದ್ದಾರೆ.
ಈ ಆರೋಪಿಗಳು ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ಉಗ್ರ ಕೃತ್ಯಗಳನ್ನು ನಡೆಸಲು ಲಷ್ಕರೆ ಸಂಘಟನೆಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಎನ್ ಐ ಎ ಆರೋಪ ಪಟ್ಟಿ ಸಲ್ಲಿಸಿತ್ತು.