ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮಾದಕ ವಸ್ತು ವಶವಿರಿಸಿದ್ದ ಸೇನಾ ಮುಖ್ಯಸ್ಥ ಬಂಧನ

ರು. 15 ಕೋಟಿ ಮೌಲ್ಯದ ಮಾದಕ ವಸ್ತು ಸ್ಯೂಡೋಎಫೆಡ್ರಿನ್ ವಶವಿರಿಸಿಕೊಂಡಿದ್ದ ಭಾರತದ ಭೂಸೇನೆ ಮುಖ್ಯಸ್ಥನನ್ನು...

Rashmi Kasaragodu
Updated On : 24 Feb 2013, 7:07 am

ಇಂಫಾಲ್: ರು. 15 ಕೋಟಿ ಮೌಲ್ಯದ ಮಾದಕ ವಸ್ತು ಸ್ಯೂಡೋಎಫೆಡ್ರಿನ್ ವಶವಿರಿಸಿಕೊಂಡಿದ್ದ ಭಾರತದ ಭೂಸೇನೆ ಮುಖ್ಯಸ್ಥನನ್ನು ಭಾನುವಾರ ಬಂಧಿಸಲಾಗಿದೆ.

ಇಂಫಾಲ್‌ನಲ್ಲಿ ಕಳೆದ 4 ವರ್ಷಗಳಿಂದ ರಕ್ಷಣಾ ಪಡೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ)ಯಾಗಿ ಕಾರ್ಯ ನಿರ್ವಹಿಸುತ್ತಿರುವ ಅಜಯ್ ಚೌಧರಿ ಬಂಧಿತ
ವ್ಯಕ್ತಿಯಾಗಿದ್ದಾರೆ. ಇವರನ್ನು ಮಣಿಪುರದಿಂದ 60 ಕಿ.ಮೀ ದೂರದಲ್ಲಿರುವ ಪಲ್ಲೇಲ್ ಎಂಬಲ್ಲಿ ಬಂಧಿಸಲಾಗಿದೆ.

ಚೌಧರಿ ಜತೆಗೆ ಗಡಿ ರಕ್ಷಣಾ ಪಡೆಯಲ್ಲಿ ಸೈನಿಕರಾಗಿರುವ 6 ಜನರನ್ನೂ ಬಂಧಿಸಲಾಗಿದೆ.

ಮ್ಯಾನ್‌ಮಾರ್‌ನಿಂದ ಕಳ್ಳ ಸಾಗಾಣಿಕೆ ಮಾಡಿದ ವಿವಿಧ ಬ್ರಾಂಡ್‌ಗಳ ಟ್ಯಾಬ್ಲೆಟ್‌ಗಳನ್ನು ಇವರು ಮೊರೇಹ್ ಎಂಬಲ್ಲಿಗೆ ಮೂರು ವಾಹನಗಳಲ್ಲಿ ಸಾಗಿಸುತ್ತಿದ್ದರು.
ಸ್ಯೂಡೋಎಫೆಡ್ರಿನ್ ಅತೀ ಹೆಚ್ಚು ಬೇಡಿಕೆಯಿರುವ ಮಾದಕ ವಸ್ತುವಾಗಿದ್ದು, ಈ ಟ್ಯಾಬ್ಲೆಟ್‌ಗಳನ್ನು ವಾಹನದ ಮೇಲೆ ಹೇರಲಾಗಿತ್ತು.

ಮೂಗು ಕಟ್ಟುವಿಕೆಗೆ ಔಷಧಿಯಾಗಿ ಸ್ಯೂಡೋಎಫೆಡ್ರಿನ್ ನ್ನು ಬಳಸಾಗುತ್ತಿದ್ದು, ಇದನ್ನು ಸೇವಿಸಿದರೆ ದೇಹಕ್ಕೆ ಹೆಚ್ಚಿನ ಚೈತನ್ಯ ಬರುತ್ತದೆ.

ಈ ಪ್ರಕರಣದ ಬಗ್ಗೆ ರಕ್ಷಣಾ ಸಚಿವಾಲಯ ತನಿಖೆ ನಡೆಸುವುದಾಗಿ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement