ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಜೀವ್ ಗಾಂಧಿಯ ಹತ್ಯೆಗೈದವರಿಗೆ ಗಲ್ಲು ಬೇಡ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೈದವರನ್ನು ಗಲ್ಲು ಶಿಕ್ಷೆಗೊಳಪಡಿಸುವುದು ಬೇಡ ಎಂದು ನಿವೃತ್ತ ...

Rashmi Kasaragodu
Updated On : 24 Feb 2013, 5:30 am

ಕೊಟ್ಟಾಯಂ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೈದವರನ್ನು ಗಲ್ಲು ಶಿಕ್ಷೆಗೊಳಪಡಿಸುವುದು ಬೇಡ ಎಂದು  ನಿವೃತ್ತ ನ್ಯಾಯಮೂರ್ತಿಯೊಬ್ಬರು ಹೇಳಿದ್ದಾರೆ.

ರಾಜೀವ್ ಗಾಂಧಿ ಹತ್ಯೆಯ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದ ನ್ಯಾಯಪೀಠದ ಮುಖ್ಯಸ್ಥರಾಗಿದ್ದ ನಿವೃತ್ತ ನ್ಯಾಯಮೂರ್ತಿ ಕೆ.ಟಿ ಥೋಮಸ್ ಈ ರೀತಿ ಹೇಳಿದ್ದಾರೆ.

ರಾಜೀವ್‌ಗಾಂಧಿ ಹತ್ಯೆಯ ಆರೋಪಿಗಳಾಗಿರುವ ಮುರುಗನ್, ಸಂತಾನ್, ಪೆರರಿವಲನ್ ಈಗಾಗಲೇ 22 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿರುವುದರಿಂದ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದರೆ, 2 ಬಾರಿ ಶಿಕ್ಷೆ ವಿಧಿಸಿದಂತಾಗುತ್ತದೆ ಎಂದು ಥಾಮಸ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಮೂವರು ಆರೋಪಿಗಳು ತಮಿಳ್ನಾಡಿನ ವೆಲ್ಲೂರ್ ಜೈಲಿನಲ್ಲಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಥೋಮಸ್, 22 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದರೆ, ಅವರಿಗೆ ಒಂದೇ ತಪ್ಪಿಗೆ ಎರಡು ಬಾರಿ ಶಿಕ್ಷೆ ವಿಧಿಸಿದಂತಾಗುತ್ತದೆ. ಇದು ಕಾನೂನು ವಿರುದ್ಧ ಎಂದು ಹೇಳಿದ್ದಾರೆ.

ಅದೇ ವೇಳೆ ಈ ಆರೋಪಿಗಳ ಕ್ಷಮಾದಾನ ಅರ್ಜಿಯನ್ನು ತಳ್ಳಿಹಾಕಿರುವ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಮತ್ತೊಮ್ಮೆ ಅದನ್ನು ಪುನರ್ ಪರಿಶೀಲನೆಗೊಳಪಡಿಸಬೇಕೆಂದು ಥೋಮಸ್ ವಿನಂತಿಸಿದ್ದಾರೆ.

1999ರಲ್ಲಿ ಥೋಮಸ್, ನ್ಯಾಯಮೂರ್ತಿ ಡಿ.ಪಿ  ವಾದ್ವಾ ಮತ್ತು ನ್ಯಾಯಮೂರ್ತಿ ಎಸ್‌ಎಸ್‌ಎಮ್ ಖ್ವಾದ್ರಿ ಅವರ ನ್ಯಾಯಪೀಠವು ಮುರುಗನ್, ಸಂತಾನ್, ಪೆರರಿವಲನ್ ಮತ್ತು ಮುರುಗನ್‌ರ ಪತ್ನಿ ನಳಿನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.

ಏತನ್ಮಧ್ಯೆ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ನಳಿನಿ ಅವರ ಕ್ಷಮಾದಾನ ಅರ್ಜಿ ಸ್ವೀಕರಿಸಿರುವುದರಿಂದ ನಳಿನಿಗೆ ಗಲ್ಲು ಬದಲು ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement