ಹೈ ಸ್ಫೋಟ: ಸಂತ್ರಸ್ತರನ್ನು ಭೇಟಿ ಮಾಡಿದ ಪ್ರಧಾನಿ
ಮೂರು ದಿನಗಳ ಹಿಂದೆ ಅವಳಿ ಬಾಂಬ್ ಸ್ಫೋಟ ಸಂಭವಿಸಿದ ದಿಲ್‌ಸುಖ್ ನಗರಕ್ಕೆ ಪ್ರಧಾನಿ ಮನಮೋಹನ್ ಸಿಂಗ್...
ಹೈದ್ರಾಬಾದ್: ಮೂರು ದಿನಗಳ ಹಿಂದೆ ಅವಳಿ ಬಾಂಬ್ ಸ್ಫೋಟ ಸಂಭವಿಸಿದ ದಿಲ್‌ಸುಖ್ ನಗರಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಭಾನುವಾರ ಭೇಟಿ ನೀಡಿದ್ದಾರೆ.
ಬಾಂಬ್ ಸ್ಫೋಟದಲ್ಲಿ ಗಾಯಗೊಂಡವರಿಗೆ ಸಮಾಧಾನ ಹೇಳಿದ ಪ್ರಧಾನಿ ಬಾಂಬ್ ಸ್ಫೋಟದ ನಂತರ ತಾಳ್ಮೆ ಕಾಪಾಡಿಕೊಂಡಿದ್ದ ಹೈದ್ರಾಬಾದ್ ಜನರನ್ನು ಶ್ಲಾಘಿಸಿದ್ದಾರೆ.
ಇಲ್ಲಿನ ಜನರ ಜತೆ ನಾನಿದ್ದೇನೆ ಎಂದು ಹೇಳಿದ ಪ್ರಧಾನಿ ನಾವು ಶಾಂತಿ ಮತ್ತು ಸಮಾಧಾನವನ್ನು ಕಾಪಾಡಬೇಕು ಎಂದಿದ್ದಾರೆ.
ಗುರುವಾರ ಸಂಭವಿಸಿದ ಅವಳಿ ಬಾಂಬ್ ಸ್ಫೋಟದಲ್ಲಿ 16 ಮಂದಿ ಸಾವನ್ನಪ್ಪಿದ್ದು, ನೂರಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ದಿಲ್‌ಸುಖ್‌ನಗರದಲ್ಲಿ ಸಂತ್ರಸ್ತರಲ್ಲಿ ಮಾತನಾಡಿದ ಪ್ರಧಾನಿ ಇಂಥಾ ದುರ್ಘಟನೆಯ ನಂತರ ಹೈದ್ರಾಬಾದ್‌ನ ಜನರು ಯಾವುದೇ ಪ್ರಚೋದನೆಗೊಳಗಾಗದೆ ತಾಳ್ಮೆ ವಹಿಸಿರುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.