ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಹೈ ಸ್ಫೋಟಕ್ಕೆ ಹೊಣೆ ಲಷ್ಕರೆ ತೊಯ್ಬಾ?

ಹೈದ್ರಾಬಾದ್‌ನ ದಿಲ್‌ಸುಖ್‌ನಗರದಲ್ಲಿ ಗುರುವಾರ ಸಂಭವಿಸಿದ ಅವಳಿ ಬಾಂಬ್ ಸ್ಫೋಟದಲ್ಲಿ ಲಷ್ಕರೆ ತೊಯ್ಬಾ ಉಗ್ರ ಸಂಘಟನೆ...

Rashmi Kasaragodu
Updated On : 24 Feb 2013, 6:11 am

ಹೈದ್ರಾಬಾದ್:  ಹೈದ್ರಾಬಾದ್‌ನ ದಿಲ್‌ಸುಖ್‌ನಗರದಲ್ಲಿ ಗುರುವಾರ ಸಂಭವಿಸಿದ ಅವಳಿ ಬಾಂಬ್ ಸ್ಫೋಟದಲ್ಲಿ ಲಷ್ಕರೆ ತೊಯ್ಬಾ ಉಗ್ರ ಸಂಘಟನೆಯ ಕೈವಾಡವಿರುವುದು ಬಹುತೇಕ ಖಚಿತವಾದಂತಿದೆ.

ಯಾಕೆಂದರೆ ಲಷ್ಕರೆ ತೊಯ್ಬಾ ಸಂಘಟನೆಯು ಬೆದರಿಕೆ ಪತ್ರವೊಂದು ತನಗೆ ಬಂದಿದೆ ಎಂದು ಆಂಧ್ರ ಪ್ರದೇಶದ ಬಿಜೆಪಿ ಅಧ್ಯಕ್ಷ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ.

ಈ ಪತ್ರದಲ್ಲಿ ಹೈದ್ರಾಬಾದ್‌ನಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟದ ಹೊಣೆ ತಮ್ಮದೆಂದು ಹೇಳಿದ್ದು, ತಾವು ಇನ್ನಷ್ಟು ಬಾಂಬ್ ಸ್ಫೋಟ ನಡೆಸಲಿದ್ದೇವೆ ಎಂಬ ಬೆದರಿಕೆಯನ್ನೂ ಒಡ್ಡಲಾಗಿದೆ.

ಆದಾಗ್ಯೂ, ಈ ಪತ್ರವನ್ನು ಲಷ್ಕರೆ ತೊಯ್ಬಾ ಸಂಘಟನೆ ಬರೆದಿರಬಹುದು ಎಂದು ಊಹಿಸಲಾಗುತ್ತಿದ್ದು, ಈ ಪತ್ರದ ಸತ್ಯಾಸತ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದಿಲ್‌ಸುಖ್‌ನಗರ್‌ನಲ್ಲಿ ಗುರುವಾರ ಸಂಭವಿಸಿದ ಅವಳಿ ಬಾಂಬ್ ಸ್ಫೋಟದ ಹೊಣೆಯನ್ನು ಇಲ್ಲಿಯವರೆಗೆ ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ.

ಪ್ರಸ್ತುತ ಬಾಂಬ್ ಸ್ಫೋಟದಲ್ಲಿ 16 ಜನರು ಸಾವನ್ನಪ್ಪಿದ್ದು, ನೂರಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement