ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗವಾಸ್ಕರ್ ಟೆಸ್ಟ್: ಗೆಲುವಿನ ಸನಿಹದಲ್ಲಿ ಭಾರತ

ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 232/9ಕ್ಕೆ...

Parashurama
Updated On : 25 Feb 2013, 5:43 am

ಚೆನೈ: ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 232/9ಕ್ಕೆ ವಿಕೆಟ್‌ಕಳೆದುಕೊಂಡು ಕೇವಲ 40ರನ್‌ಗಳ ಸಾಧಾರಣ ಮುನ್ನಡೆ ಸಾಧಿಸಿದೆ. ಈ ಮೂಲಕ ಭಾರತ ಸುಲಭವಾಗಿ ಗೆಲ್ಲುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಇಂದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ಆರ್.ಅಶ್ವೀನ್ ಹಾಗೂ ರವೀಂದ್ರ ಜಡೇಜಾ ಕರಾರುವಕ್ ದಾಳಿ ಮಾಡುವ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ರನ್‌ವೇಗಕ್ಕೆ ಕಡಿವಾಣ ಹಾಕಿದರು. ಭಾರತದ ಸ್ಪೀನ್ ದಾಳಿ ಎದುರಿಸಲಾಗದ ಆಸ್ಟ್ರೇಲಿಯಾದ ಆಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಾಲಾಗಿ ಒಬ್ಬರಂತೆ ಒಬ್ಬರು ಪೆವಿಲಿಯನ್ ಸೇರಿಕೊಂಡರು.

128/6 ಕಳೆದುಕೊಂಡು ಆಸ್ಟ್ರೇಲಿಯಾ ಹೀನಾಯ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಜೊತೆಯಾದ ಹೆನ್ರಿಕ್ ಮತ್ತು ಕ್ಲಾರ್ಕ್ ಜೋಡಿ ಭಾರತದ ಸ್ಪೀನ್ ಬೌಲ್‌ರಗಳಿಗೆ ಪ್ರತಿರೋಧ ಒಡ್ಡಿದರಲ್ಲದೇ ಭಾರತದ ಇಂದೇ ಗೆಲುವು ಸಾಧಿಸುವ ಆಸೆಯನ್ನು ನಿರಾಸೆಗೊಳಿಸಿದರು.

ಈ ಮುಂಚೆ ಭಾರತದ 572ರನ್‌ಗಳ ಬೃಹತ್ ಗುರಿಯ ಬೆನ್ನು ಹತ್ತಿದ ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌ನಲ್ಲಿ 380ರನ್‌ಗಳಿಸಿ ಆಲೌಟ್ ಆಗಿತ್ತು. ನಂತರ 4ನೇ ದಿನದಂದು ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ, ಭಾರತದ ಸ್ವೀನ್‌ದಾಳಿಗೆ ತತ್ತರಿಸಿ, ಕೇವಲ 232/9 ರನ್‌ಗಳಿಸಿ 40ರನ್‌ಗಳ ಅಲ್ಪ ಮುನ್ನಡೆ ಕಾಯ್ದುಕೊಳ್ಳುವ ಮೂಲಕ 5ನೇ ದಿನವನ್ನು ಕಾಯ್ದುಕೊಂಡಿದೆ.

ಭಾರತದ ಪರ ಆರ್.ಅಶ್ವೀನ್ 55/6, ರವೀಂದ್ರ ಜಡೇಜಾ 58/2 ರನ್ ನೀಡಿ ವಿಕೆಟ್ ಕಿತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement