ಬಿಡದಿ ದಾಂಧಲೆ ಪ್ರಕರಣ: ನಿತ್ಯಾನಂದ ವಿರುದ್ಧದ ಎಫ್ಐಆರ್ ರದ್ದು
ಬೆಂಗಳೂರು: ಬಿಡದಿ ಆಶ್ರಮದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳು ನೀಡಿದ್ದ ದೂರಿನ ಆಧಾರದ ಮೇಲೆ ನಿತ್ಯಾನಂದ ವಿರುದ್ಧ ದಾಖಲಾಗಿದ್ದ ಎಫ್ಐಆರ್ನ್ನು ಸೋಮವಾರ ಹೈಕೋರ್ಟ್ ರದ್ದುಗೊಳಿಸಿದೆ.
ತನಿಖಾ ವರದಿಯಲ್ಲಿ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನಿತ್ಯಾ ವಿರುದ್ಧದ ಎಫ್ಐಆರ್ನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.
ಬಿಡದಿ ಆಶ್ರಮದ ಗಲಾಟೆ ಸಂಬಂಧ ನವ ನಿರ್ಮಾಣ ಸೇನೆ ನೀಡಿದ್ದ ದೂರನ್ನು ಆಧರಿಸಿ ರಾಮನಗರ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಅವರು ನಿತ್ಯಾ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.