ಬೇಲ್ ಡೀಲ್ ಪ್ರಕರಣ: ರೆಡ್ಡಿ ಟೀಂಗೆ ಸುಪ್ರೀಂ ನೋಟಿಸ್
ಬೇಲ್ಗಾಗಿ ಡೀಲ್ ಪ್ರಕರಣ ಸಂಬಂಧ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಅವರ ಸಹೋದರ, ಶಾಸಕ ಸೋಮಶೇಖರ್ ರೆಡ್ಡಿ..
ನವದೆಹಲಿ: ಬೇಲ್ಗಾಗಿ ಡೀಲ್ ಪ್ರಕರಣ ಸಂಬಂಧ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಅವರ ಸಹೋದರ, ಶಾಸಕ ಸೋಮಶೇಖರ್ ರೆಡ್ಡಿ, ಕಂಪ್ಲಿ ಶಾಸಕ ಸುರೇಶ್ ಬಾಬು ಹಾಗೂ ನ್ಯಾ. ಪಟ್ಟಾಭಿರಾಮರಾವ್ ಅವರಿಗೆ ಸೋಮವಾರ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಬೇಲ್ ಡೀಲ್ ಪ್ರಕರಣದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ನಿಂದ ಜಾಮೀನು ಪಡೆದುಕೊಂಡಿದ್ದ ಈ ನಾಲ್ವರು ಆರೋಪಿಗಳ ಜಾಮೀನನ್ನು ರದ್ದು ಮಾಡಬೇಕು ಎಂದು ಕೋರಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 6 ವಾರದಲ್ಲಿ ಉತ್ತರಿಸುವಂತೆ ನಾ.ಪಟ್ಟಾಭಿರಾಮರಾವ್ ಸೇರಿದಂತೆ ರೆಡ್ಡಿ ಮತ್ತು ಟೀಂಗೆ ನೋಟಿಸ್ ಜಾರಿ ಮಾಡಿದೆ.
ಒಂದು ವೇಳೆ ಜಾಮೀನು ರದ್ದಾದರೆ ಸೋಮಶೇಖರ ರೆಡ್ಡಿ ಮತ್ತು ಸುರೇಶ್ ಬಾಬು ಮತ್ತೆ ಜೈಲು ಸೇರುವ ಸಾಧ್ಯತೆ ಇದೆ.