ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮಮತಾ ಕುರಿತ ಬೆಂಗಾಳಿ ಚಿತ್ರಕ್ಕೆ ಸೆನ್ಸಾರ್ ಕಟ್

ಸುಮನ್ ಮುಖ್ಯೋಪಾಧ್ಯಾಯ ನಿರ್ದೇಶನದ ಕಂಗಲ್ ಮಲ್ಸತ್ (ವಾರ್ ಕ್ರೈ ಆಫ್ ಪೂರ್) ಬೆಂಗಾಳಿ ಚಿತ್ರದಲ್ಲಿ ಮಮತಾ ಬ್ಯಾನರ್ಜಿ...

Parashurama
Updated On : 25 Feb 2013, 5:00 am

ಕೋಲ್ಕತ್ತಾ: ಸುಮನ್ ಮುಖ್ಯೋಪಾಧ್ಯಾಯ ನಿರ್ದೇಶನದ ಕಂಗಲ್ ಮಲ್ಸತ್ (ವಾರ್ ಕ್ರೈ ಆಫ್ ಪೂರ್) ಬೆಂಗಾಳಿ ಚಿತ್ರದಲ್ಲಿ ಮಮತಾ ಬ್ಯಾನರ್ಜಿ ಪ್ರಮಾಣ ಸ್ವೀಕಾರದ ಚಿತ್ರಗಳು ಇರುವುದರಿಂದ ಸೋಮವಾರ ಸೆನ್ಸಾರ್ ಮಂಡಳಿ ಚಿತ್ರ ಬಿಡುಗಡೆ ಪರವಾನಿಗೆ ನೀಡಿಲ್ಲ.

ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭದ ಚಿತ್ರಗಳು ಹಾಗೂ ಸಿಂಗೂರಿನಿಂದ ಟಾಟಾ ಕಂಪನಿಯನ್ನು ಹೊರ ಓಡಿಸಿದ ದೃಶ್ಯಗಳು ಇರುವ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಪರವಾನಿಗೆ ನೀಡಿಲ್ಲ.

ಚಿತ್ರದಲ್ಲಿ ವಿವಾದಾತ್ಮಕ ಹೇಳಿಕೆಗಳು, ಸಿಂಗೂರಿನಲ್ಲಿ ನಡೆದ ಟಾಟಾ ಸಂಸ್ಥೆಯೊಂದಿಗಿನ ರೈತರ ಜಟಾಪಟಿಗಳ ದೃಶ್ಯಗಳು, ಸರ್ಕಾರ-ರೈತರೊಂದಿಗಿನ ಹೋರಾಟ, ಹಿಂಸಾಚಾರ ದೃಶ್ಯಗಳು ಚಿತ್ರದಲ್ಲಿವೆ. ಈ ಚಿತ್ರ ಬಿಡುಗಡೆಯಿಂದ ಸಮಾಜದ ಮೇಲೆ ಪ್ರಭಾವ ಉಂಟಾಗಿ ಮತ್ತೆ ಹಿಂಸಾಚಾರ ಸಂಭವಿಸುವ ಸಾಧ್ಯತೆ ಇರುವುದರಿಂದ ಚಿತ್ರಕ್ಕೆ ಬಿಡುಗಡೆ ಪ್ರಮಾಣ ಪತ್ರ ನೀಡಿಲ್ಲ ಎಂದು ಸೆನ್ಸಾರ್ ಮಂಡಳಿ ತಿಳಿಸಿದೆ.

ಖ್ಯಾತ ಬರಹಗಾರ್ತಿ ಮಹಾಶ್ವೇತಾ ದೇವಿ ಪುತ್ರ ಬರೆದಿರುವ ಕಾದಂಬರಿ ಆಧಾರಿತ ಪುಸ್ತಕವನ್ನು ಆಧರಿಸಿ ಈ ಚಿತ್ರ ನಿರ್ಮಿಸಿಲಾಗಿದೆ. ಚಿತ್ರದಲ್ಲಿ ಟಿಎಂಸಿ ಬಂಡಾಯ ಸಂಸದ ಕಬೀರ್ ಸುಮನ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.

ತಾನು ಪ್ರಾಮಾಣಿಕವಾಗಿ ನೈಜ ಕಥೆ ಆಧಾರಿತ ಚಿತ್ರವನ್ನು ನಿರ್ಮಿಸಿದ್ದು, ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಅಲ್ಲ ಎಂದು ನಿರ್ದೇಶಕ ಸುಮನ್ ತಿಳಿಸಿದ್ದಾರೆ. ರಾಜಕೀಯ ಬಣ್ಣ ಹಚ್ಚಿ ಚಿತ್ರ ಬಿಡುಗಡೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಸುಮನ್ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement