ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಸರಲ್' ಸ್ಯಾಟಲೈಟ್ ಅಂತರಿಕ್ಷಕ್ಕೆ ಹಾರಲು ಸಜ್ಜು

ಇಂಡೋ-ಫ್ರೆಂಚ್ ನಿರ್ಮಿತ 'ಸರಲ್' ಸ್ಯಾಟಲೈಟ್ ಆಂಧ್ರಪ್ರದೇಶದಲ್ಲಿರುವ ಇಸ್ರೋದ ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಬಾಹ್ಯಾಕಾಶ...

Parashurama
Updated On : 25 Feb 2013, 3:57 am

ಶ್ರೀಹರಿಕೋಟಾ: ಇಂಡೋ-ಫ್ರೆಂಚ್ ನಿರ್ಮಿತ 'ಸರಲ್' ಸ್ಯಾಟಲೈಟ್  ಆಂಧ್ರ ಪ್ರದೇಶದಲ್ಲಿರುವ ಇಸ್ರೋದ ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಬಾಹ್ಯಾಕಾಶ  ಕೇಂದ್ರದಿಂದ ಸೋಮವಾರ ಉಡಾವಣೆಗೊಳ್ಳಲು ಸಜ್ಜಾಗಿದೆ.

ಫ್ರೆಂಚ್ ಸಹಯೋಗದ ಈ ಪಿಎಸ್ಎಲ್ವಿ ಸ್ಯಾಟಲೈಟ್ ಇಂದು ಸಂಜೆ 5.56 ಗಂಟೆಗೆ ಉಡಾವಣೆಗೊಳ್ಳಲಿದ್ದು, ಖುದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಉಡಾವಣೆಗೆ ಸಾಕ್ಷಿಯಾಗಲಿದ್ದಾರೆ.

ಇಸ್ರೋ ಇವರೆಗೆ 23 ಪಿಎಸ್ಎಲ್‌ವಿ ಸ್ಯಾಟಲೈಟ್ ಗಳನ್ನು ಉಡಾಯಿಸಲಾಗಿದ್ದು, ಅದರಲ್ಲಿ 21 ಯಶಸ್ವಿಯಾಗಿವೆ. 668 ಕೆ.ಜಿ ಭಾರ ಹಾಗೂ 44.4 ಮೀಟರ್ ಅಗಲವನ್ನು ಈ ಸ್ಯಾಟಲೈಟ್ ಹೊಂದಿದೆ.

ಕಳೆದ ಡಿಸೆಂಬರ್ 2012ರಲ್ಲೇ ಇಸ್ರೋ ಸರಲ್ ಸ್ಯಾಟಲೈಟ್ ಅನ್ನು ಅಂತರಿಕ್ಷಕ್ಕೆ ಹಾರಿಸುವ ಯೋಜನೆ ಹಾಕಿಕೊಂಡಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ಉಡಾವಣೆ ಸಾಧ್ಯವಾಗಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement