ಚೆನ್ನೈ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಭಾರತ ಮಂಗಳವಾರ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ.
ದ್ವಿಶತಕ ಬಾರಿಸಿದ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಪಂದ್ಯಶ್ರೆಷ್ಠ ಪ್ರಶಸ್ತಿ ಪಡೆದರು.
ಭಾನುವಾರ ದಿನಾಂತ್ಯಕ್ಕೆ ತನ್ನ ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ ನಷ್ಟಕ್ಕೆ 515 ರನ್ ಗಳಿಸಿದ್ದ ಭಾರತ, ಸೋಮವಾರ ತನ್ನ ಇನಿಂಗ್ಸ್ ಮುಂದುವರಿಸಿ 572 ರನ್ಗಳಿಗೆ ಆಲೌಟ್ ಆಯಿತು. ತದನಂತರ, ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ, ದಿನಾಂತ್ಯಕ್ಕೆ 9 ವಿಕೆಟ್ಗಳನ್ನು ಕಳೆದುಕೊಂಡು 232 ರನ್ ಗಳಿಸಿತ್ತು.
ಇಂದು ಬೆಳಗ್ಗೆ ಮತ್ತೆ ಆಟ ಆರಂಭಿಸಿದ ಆಸ್ಟ್ರೇಲಿಯಾದ ಹನ್ರಿಕೇಸ್(ಅಜೆಯ 81) ಮತ್ತು ಲಯಾನ್(11) ಅವರು ಎರಡನೇ ಇನ್ನಿಂಗ್ಸ್ನಲ್ಲಿ 241 ರನ್ ಸೇರಿಸುವ ಮೂಲಕ ಭಾರತಕ್ಕೆ 50 ರನ್ಗಳ ಗುರಿ ನೀಡಿದರು.
ಅತಿ ಕಡಿಮೆ ಮೊತ್ತದ ಬೆನ್ನು ಹತ್ತಿದ ಟೀಂ ಇಂಡಿಯಾ ತನ್ನ ಇಬ್ಬರು ಆರಂಭಿಕ ಆಟಗಾರರಾದ ಮುರಳಿ ವಿಜಯ್(6) ಮತ್ತು ವಿರೇಂದ್ರ ಸೇಹ್ವಾಗ್(19) ಅವರ ವಿಕೇಟ್ ಕಳೆದುಕೊಂಡು 8 ವಿಕೆಟ್ಗಳ ಜಯ ಸಾಧಿಸಿತು.