ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಇಲ್ಲ
ಬಜೆಟ್ನಲ್ಲಿ ರೇಲ್ವೆ ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಇಲ್ಲ ಎಂದು ರೇಲ್ವೆ ಸಚಿವ ಪವನಕುಮಾರ್ ಬನ್ಸಲ್ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ನವದೆಹಲಿ: ಬಜೆಟ್ನಲ್ಲಿ ರೇಲ್ವೆ ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಇಲ್ಲ ಎಂದು ರೇಲ್ವೆ ಸಚಿವ ಪವನಕುಮಾರ್ ಬನ್ಸಲ್ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಆದರೆ ಪ್ರತಿವರ್ಷ ಶೇ.5ರಷ್ಟಾದರೂ ಟಿಕೆಟ್ ದರ ಹೆಚ್ಚಳ ಮಾಡುವ ಅಗತ್ಯ ಇದೆ ಎಂದು ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ತಮ್ಮ ಚೊಚ್ಚಲ ರೇಲ್ವೆ ಬಜೆಟ್ ಮಂಡಿಸಿದ ಬನ್ಸಲ್, ದರ ಏರಿಕೆ ಹಿಂದೆ ಆದಾಯ ಗಳಿಸುವ ಉದ್ದೇಶ ಇಲ್ಲ. ಆದರೆ ರೇಲ್ವೆ ಇಂಧನದ ಖರ್ಚು ಹೆಚ್ಚುತ್ತಲೇ ಇದೆ. ಡೀಸೆಲ್ ಬೆಲೆ ಏರಿಕೆಯಿಂದ ಟಿಕೆಟ್ ಪ್ರಯಾಣ ದರ ಏರಿಕೆ ಅನಿವಾರ್ಯವಾಗುತ್ತದೆ ಎಂದರು.
ಸರಕು ಸಾಗಣೆ ದರದಲ್ಲಿ ಶೇ. 5ರಷ್ಟು ಏರಿಕೆಗೆ ನಿರ್ಧಾರಿಸಲಾಗಿದೆ ಮತ್ತು ತತ್ಕಾಲ್ ಟಿಕೆಟ್ ದರದಲ್ಲೂ ಅಲ್ಪ ಮಟ್ಟದ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದರು.