ನವದೆಹಲಿ: 2013 ಹಾಗೂ 2014ನೇ ಸಾಲಿನ ರೇಲ್ವೆ ಬಜೆಟ್ ಮಂಡನೆ ಆರಂಭಿಸಿರುವ ಸಚಿವ ಪವನ್ಕುಮಾರ್ ಬನ್ಸಲ್ ಅವರು, ಮೊದಲ ಬಾರಿಗೆ ರೇಲ್ವೆ ಬಜೆಟ್ ಮಂಡಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
17 ವರ್ಷದ ಬಳಿಕ ರೇಲ್ವೆ ಬಜೆಟ್ ಮಂಡಿಸುತ್ತಿರುವ ಕಾಂಗ್ರೆಸ್ನ ಸಚಿವ ಬನ್ಸಲ್, ಭಾರತದ ರೇಲ್ವೆ ಇಲಾಖೆ ಆರ್ಥಿಕವಾಗಿ ಸುಸ್ಥಿರವಾಗಿರಬೇಕು. ಎಲ್ಲ ಗ್ರಾಹಕರಿಗೆ ಸಮರ್ಪಕ ಸೇವೆ ಲಭಿಸಬೇಕು ಮತ್ತು ರೈಲು ಅಪಘಾತವನ್ನು ನಿಯಂತ್ರಿಸಬೇಕಿದೆ ಎಂದು ಹೇಳಿದರು.
ಹೊಸ ಯೋಜನೆ ಹಾಗೂ ಹೊಸ ಹೊಸ ರೈಲುಗಳಿಗೆ ಬೇಡಿಕೆ ಬಂದಿದೆ. ಆದರೆ ರೇಲ್ವೆ ಇಲಾಖೆ ಸಂಪನ್ಮೂಲದ ಕೊರತೆ ಎದುರಿಸುತ್ತಿದೆ ಎಂದರು.
ಯೋಜನಾ ಆಯೋಗ ರೇಲ್ವೆ ಬಜೆಟ್ನ್ನು 5.19 ಲಕ್ಷ ಕೋಟಿ ರುಪಾಯಿಗೆ ನಿಗದಿಗೊಳಿಸಿದೆ. ಫಂಡ್ ಕಡಿಮೆಯಾದ ಕಾರಣ ಹಲವು ಯೋಜನೆಗಳು ನಿಂತಿವೆ. ಗುಣಮಟ್ಟದ ಸೇವೆ ನೀಡಲು ರೇಲ್ವೆ ಇಲಾಖೆ ಬದ್ಧವಾಗಿದೆ. ಆದರೆ ಇದಕ್ಕಾಗಿ ಇಲಾಖೆಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ರೇಲ್ವೆ ಬಜೆಟ್ 2013 - ಲೋಕಸಭೆಯಿಂದ ನೇರಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ