ಭಯೋತ್ಪಾದನೆಗೆ ಬಣ್ಣ, ಧರ್ಮವಿಲ್ಲ: ಕೇಂದ್ರ
ನವದೆಹಲಿ: ಭಯೋತ್ಪಾದನೆಗೆ ಯಾವುದೇ ಬಣ್ಣ ಅಥವಾ ಧರ್ಮವಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಅಭಿಪ್ರಾಯಪಟ್ಟಿದೆ.
ಯಾವುದೇ ವ್ಯಕ್ತಿಯ ಮೇಲೆ ಕೇಸು ದಾಖಲಿಸುವಾಗ ಆತನ ಸಮುದಾಯವನ್ನು ನೋಡಿ ದಾಖಲಿಸುವುದಿಲ್ಲ ಹಾಗೂ ಆತನ ಧರ್ಮವನ್ನು ಆಧಾರಿಸಿ ಶಿಕ್ಷೆ ನೀಡುವುದಿಲ್ಲ. ನ್ಯಾಯಾ ಎಲ್ಲರಿಗೂ ಒಂದೇ ಆಗಿರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಲೋಕಸಭಾದಲ್ಲಿ ನಡೆದ ಪ್ರಶ್ನೋತ್ತರ ವೇಳೆ ಬಸುದೇಬ್ ಆಚಾರ್ಯ(ಸಿಪಿಐ-ಎಂ) ಅವರು ಮುಸ್ಲಿಂ ಜನಾಂಗದ ಅನೇಕ ಯುವಕರು 10-15 ವರ್ಷಗಳ ಜೈಲಿನಲ್ಲಿ ಯಾತನೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.