ರೇಲ್ವೆ ಬಜೆಟ್ ಕಾರ್ಯರೂಪಕ್ಕೆ ತರುವಂತದ್ದು: ಚಿದು
ನವದೆಹಲಿ: 2013-14ನೇ ಸಾಲಿನ ರೇಲ್ವೆ ಬಜೆಟ್ ವ್ಯವಾಹಾರಿಕವಾಗಿದ್ದು, ಕಾರ್ಯರೂಪಕ್ಕೆ ತರುವಂತದ್ದಾಗಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಮಂಗಳವಾರ ಹೇಳಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬನ್ಸಾಲ್ ಅವರು ಮಂಡಿಸಿರುವ ರೇಲ್ವೆ ಬಜೆಟ್ ಕಾರ್ಯರೂಪಕ್ಕೆ ತರುವ ಬಜೆಟ್ ಆಗಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ರೈಲು ಮಾರ್ಗ ಮತ್ತು ರೈಲುಗಳನ್ನು ರಾಜ್ಯಗಳಿಗೆ ನೀಡಿರುವುದು ತುಂಬಾ ಖುಷಿ ತಂದಿದೆ. ಬನ್ಸಾಲ್ ಅವರು ಅನೇಕ ನೂತನ ಯೋಜನೆಗಳನ್ನು ಮಂಡಿಸಿರುವುದು ಶ್ಲಾಘನೀಯ ಎಂದು ಅವರು ಹೇಳಿದ್ದಾರೆ.