'ರೇಲ್ವೆ ಬಜೆಟ್ -ರಾಯ್ ಬರೇಲಿ ಬಜೆಟ್': ಬಿಜೆಪಿ ಟೀಕೆ
ನವದೆಹಲಿ: ಯುಪಿಎ ಸರ್ಕಾರ ಮಂಡಿಸಿರುವ 2013-14ನೇ ಸಾಲಿನ ರೇಲ್ವೆ ಬಜೆಟ್, ರಾಯ್ ಬರೇಲಿ ಬಜೆಟ್ ಎಂದು ಭಾರತೀಯ ಜನತಾ ಪಕ್ಷಾ ಮಂಗಳವಾರ ಟೀಕಿಸಿದೆ.
ಇಂದು ರೈಲ್ವೆ ಸಚಿವ ಪಿ.ಕೆ ಬನ್ಸಾಲ್ ಅವರು ಮಂಡಿಸಿದ ರೇಲ್ವೆ ಬಜೆಟ್ ತೃಪ್ತಿ ತಂದಿಲ್ಲ ಎಂದು ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಹೇಳಿದ್ದಾರೆ.
ಎನ್ಡಿಎ ಸರ್ಕಾರ ಇರುವ ರಾಜ್ಯಗಳಿಗೆ ರೈಲ್ವೆ ಸೌಲ್ಯಭ್ಯ ನೀಡುವಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ. ಇದರಿಂದ ಎನ್ಡಿಎ ಆಡಳಿತದ ರಾಜ್ಯಗಳಿಗೆ ಅನ್ಯಾಯವಾಗಿದೆ ಎಂದು ಅವರು ದೂರಿದ್ದಾರೆ.
ಗುಜರಾತ್, ಮಹಾರಾಷ್ಟ್ರ, ಚತ್ತೀಸ್ಗಡ್ ಮತ್ತು ಬಿಹಾರ್ ರಾಜ್ಯಗಳಿಗೆ ರೈಲ್ವೆ ಬಜೆಟ್ನಲ್ಲಿ ಅನ್ಯಾಯವಾಗಿದ್ದು, ನೂತನ ಯೋಜನೆ ಮತ್ತು ರೈಲುಗಳ ವ್ಯವಸ್ಥೆ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.