ರೇಲ್ವೆ ಬಜೆಟ್: ವರ್ಷದೊಳಗೆ ಇ-ಟಿಕೆಟ್ ಸೇವೆ
ನವದೆಹಲಿ: 2013-14ನೇ ರೇಲ್ವೆ ಬಜೆಟ್ ಮಂಡಿಸಿದ ರೇಲ್ವೆ ಸಚಿವ ಪವನ್ಕುಮಾರ್ ಬನ್ಸಲ್ ಅವರು ವರ್ಷದೊಳಗೆ ಯುವಪೀಳಿಗೆಗಾಗಿ ಇ-ಟಿಕೆಟ್ ಸೇವೆ ಕಲ್ಪಿಸಲಾಗುವುದು ಎಂದು ಮಂಗಳವಾರ ಹೇಳಿದ್ದಾರೆ.
ಈ ವರ್ಷದ ಕೊನೆಯಲ್ಲಿ ಇ-ಟಿಕೆಟ್ ವ್ಯವಸ್ಥೆ ಜಾರಿ ಮಾಡಲಿದ್ದು, ಇದರಿಂದ ಟಿಕೆಟ್ ಬುಕಿಂಗ್ಗೆ ಇಂಟೆರ್ನೆಟ್ ಸ್ಪೀಡ್ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ನೂತನ ವ್ಯವಸ್ಥೆ ಒಂದು ನಿಮಿಷದೊಳಗೆ 7,200 ಟಿಕೆಟ್ ಬುಕ್ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದ್ದಾರೆ.