ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಹೈ'ಸ್ಫೋಟ: ಶಂಕಿತ ಉಗ್ರರ ವಶಕ್ಕೆ ಕೇಳಿದ ಎನ್ಐಎ

Mainashree
Updated On : 26 Feb 2013, 6:36 am

ನವದೆಹಲಿ: ಇಂಡಿಯನ್ ಮುಜಾಹಿದೀನ್ ಸಂಘಟನೆಯ ಶಂಕಿತ ಉಗ್ರರನ್ನು ತಮ್ಮ ವಶಕ್ಕೆ ನೀಡುವಂತೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ದೆಹಲಿ ಕೋರ್ಟ್ನಲ್ಲಿ ಮಂಗಳವಾರ ಅರ್ಜಿ ಸಲ್ಲಿಸಿದೆ.

ಎನ್ಐಎ ಹೈದ್ರಾಬಾದ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ಇರುವ ಇಬ್ಬರು ಶಂಕಿತ ಉಗ್ರರನ್ನು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.

ಆಗಸ್ಟ್ 2012ರ ಪೂಣೆ ಸ್ಫೋಟಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿ ತಿಹಾರ್ ಜೈಲಿನಲ್ಲಿರಿಸಲಾಗಿದೆ.

ಅರ್ಜಿ ವಿಚಾರಣೆ ನಡೆಸುವ ವೇಳೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಇಬ್ಬರು ಶಂಕಿತರನ್ನು ಹಾಜರು ಪಡಿಸುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಪುಣೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದ ಐಎಂ ಉಗ್ರ ಸಯೀದ್ ಮಕ್ಬೂಲ್‌ನನ್ನು ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.  ತಿಹಾರ್ ಜೈಲಿನಲ್ಲಿರುವ  ಮಕ್ಬೂಲ್ ದಾಳಿ ಕುರಿತು ಈ ಹಿಂದೆಯೇ ಸುಳಿವು ನೀಡಿದ್ದ. ಉಗ್ರ ರಿಯಾಜ್ ಭಟ್ಕಳ್ ಸೂಚನೆ ಮೇರೆಗೆ ಈತ 2012ರ ಜುಲೈನಲ್ಲಿ ದಿಲ್‌ಸುಖ್‌ನಗರ ಹಾಗೂ ಬೇಗಂ ಬಜಾರ್‌ನಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿದ್ದ. ಬಾಂಬ್ ಇಡಲು ಸೂಕ್ತ ಸ್ಥಳ ಗುರುತಿಸಿದ್ದ. ಆದರೆ, ಹೈದರಾಬಾದ್‌ಗೂ ಮೊದಲು ಐಎಂ ಉಗ್ರ ಸಿದ್ದಿಕಿ ಹತ್ಯೆಗೆ ಪ್ರತೀಕಾರವಾಗಿ ಪುಣೆ ಬಾಂಬ್ ಸ್ಫೋಟ ನಡೆಸುವಂತೆ ಉಗ್ರ ರಿಯಾಜ್ ಭಟ್ಕಳ್ ಸೂಚಿಸಿದ್ದ. ಅದರಂತೆ ಮಕ್ಬೂಲ್ ಹಾಗೂ ಇನ್ನೊಬ್ಬ ಬಂಧಿತ ಉಗ್ರ ಇಮ್ರಾನ್ ಪುಣೆ ಸ್ಫೋಟ ಕಾರ್ಯತಂತ್ರ ಸಿದ್ಧಪಡಿಸಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

ಹೈದ್ರಾಬಾದಾ ಅವಳಿ ಸ್ಫೋಟಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ಓಬೆದ್ ಉರ್ ರೆಹಮಾನ್ನನ್ನು ವಿಚಾರಣೆ ಒಳಪಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement