ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾಪ್ಟರ್ ಹಗರಣ, ಜೆಪಿಸಿ ತನಿಖೆ ಅರ್ಥಹೀನ: ಬಿಜೆಪಿ

ವಿವಿಐಪಿ ಹೆಲಿಕಾಪ್ಟರ್ ಹಗರಣವನ್ನು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯ ತನಿಖೆಗೆ ಒಪ್ಪಿಸಲು ಸಿದ್ಧವಾಗಿರುವ ಕೇಂದ್ರ ಸರ್ಕಾರದ..

Lingaraj Badiger
Updated On : 27 Feb 2013, 3:34 am

ನವದೆಹಲಿ: ವಿವಿಐಪಿ ಹೆಲಿಕಾಪ್ಟರ್ ಹಗರಣವನ್ನು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯ ತನಿಖೆಗೆ ಒಪ್ಪಿಸಲು ಸಿದ್ಧವಾಗಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ) ಕಟುವಾಗಿ ಟೀಕಿಸಿದೆ.

ಮುಂದಿನ ವರ್ಷ ಲೋಕಸಭಾ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಗರಣವನ್ನು ಜೆಪಿಸಿ ತನಿಖೆ ಒಪ್ಪಿಸಿ ವಿಳಂಬ ತಂತ್ರ ಅನುಸರಿಸುವ ಉದ್ದೇಶ ಹೊಂದಲಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಯಶವಂತ ಸಿನ್ಹಾ ಅವರು ಆರೋಪಿಸಿದ್ದಾರೆ.

ಇನ್ನು ಒಂದು ವರ್ಷದಲ್ಲೇ ಲೋಕಸಭಾ ಅವಧಿ ಅಂತ್ಯಗೊಳ್ಳಲಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಜೆಪಿಸಿ ತನಿಖೆ ಅರ್ಥಹೀನ ಮತ್ತು ಇದು ದೀರ್ಘಾವಧಿ ತನಿಖೆ ಎಂಬುದು ಗೊತ್ತಿರುವ ವಿಷಯ. ಇದೊಂದು ವಿಳಂಬ ತಂತ್ರ ಅಷ್ಟೆ ಎಂದು ಅವರು ಹೇಳಿದರು.

ಕಾಪ್ಟರ್ ಹಗರಣ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ಜೆಪಿಸಿ ಅಥವಾ ಯಾವುದೇ ರೀತಿಯ ತನಿಖೆಗೆ ವಹಿಸಲು ಸರ್ಕಾರ ಸಿದ್ಧವಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್ ಅವರು ಹೇಳಿದ್ದಾರೆ. ಅಲ್ಲದೆ ಜೆಪಿಸಿ ತನಿಖೆಗೆ ಕೆಲವು ಪ್ರತಿಪಕ್ಷಗಳು ಒತ್ತಾಯಿಸಿವೆ ಎಂದು ಸಹ ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement