ಫೋರ್ಜರಿ ಕೇಸ್: ಮುಳಬಾಗಿಲು ಶಾಸಕ ಅಮರೇಶ್ ಬಂಧನ
ಪೋರ್ಜರಿ ಪ್ರಕರಣ ಸಂಬಂಧ ಮುಳಬಾಗಿಲು ಕಾಂಗ್ರೆಸ್ ಶಾಸಕ ಅಮರೇಶ್ ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಕೋಲಾರ: ಪೋರ್ಜರಿ ಪ್ರಕರಣ ಸಂಬಂಧ ಮುಳಬಾಗಿಲು ಕಾಂಗ್ರೆಸ್ ಶಾಸಕ ಅಮರೇಶ್ ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಮುಳಬಾಗಿಲು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಶಾಸಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬೈರಕೂರು ಗ್ರಾಮದ ಬಳಿಯ ಜಮೀನು ಪರಭಾರೆ ಮಾಡುವ ಸಂದರ್ಭದಲ್ಲಿ ನಕಲಿ ದಾಖಲೆಗಳ ಸೃಷ್ಟಿ ಮತ್ತು ನಕಲಿ ಸಹಿ ಮಾಡಿದ್ದಾರೆ ಎಂಬ ಆರೋಪವನ್ನು ಅಮರೇಶ್ ಎದುರಿಸುತ್ತಿದ್ದಾರೆ.
ಮುಳಬಾಗಿಲು ಶ್ಯಾನಭೋಗರ 3. 16 ಎಕರೆ ಇನಾಮ್ತಿ ಜಮೀನು ಪರಭಾರೆ ಮಾಡಲು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂಬ ಆರೋಪ ಶಾಸಕ ಅಮರೇಶ್ ಮೇಲಿದೆ. ಈ ಸಂಬಂಧ 2006ರಲ್ಲಿ ಪ್ರಕರಣ ದಾಖಲಾಗಿತ್ತು.