ಬಜೆಟ್ಗೆ ಎಸ್ಪಿ, ಬಿಎಸ್ಪಿ ಟೀಕೆ
ನವದೆಹಲಿ: ಯುಪಿಎ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿರುವ ಸಮಾಜವಾದಿ ಪಕ್ಷ(ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಸಾಮಾನ್ಯ ಬಜೆಟ್ನ್ನು ಗುರುವಾರ ಕಟುವಾಗಿ ಟೀಕಿಸಿವೆ.
ಇಂದು ಹಣಕಾಸು ಸಚಿವ ಪಿ.ಚಿದಂಬರಂ ಅವರು ಮಂಡಿಸಿದ ಯುಪಿಎ ಸರ್ಕಾರದ ಕೊನೆಯ ಬಜೆಟ್ನ್ನು ರೈತ, ಕಾರ್ಮಿಕರ ಹಾಗೂ ಬಡವರ ವಿರೋಧಿ ಬಜೆಟ್ ಎಂದಿರುವ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು, ಇದನ್ನು ಸಂಸತ್ತಿನಲ್ಲಿ ವಿರೋಧಿಸುವುದಾಗಿ ಹೇಳಿದ್ದಾರೆ.
ಈ ಬಜೆಟ್ನಲ್ಲಿ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕೇವಲ ಶೇ.10ರಷ್ಟು ಜನತೆಯನ್ನು ಗಮನದಲ್ಲಿಟ್ಟುಕೊಂಡು ಕೃಷಿಯಲ್ಲಿ ತೊಡಗಿರುವ ಶೇ.65ರಷ್ಟು ರೈತರನ್ನು ಕಡೆಗಣಿಸಲಾಗಿದೆ. ತಮ್ಮ ಪಕ್ಷ ಸಂಸತ್ತಿನಲ್ಲಿ ಬಜೆಟ್ ವಿರೋಧಿಸಲಿದೆ ಮತ್ತು ಹಣಕಾಸು ಮಸೂದೆಯ ವಿರುದ್ಧವಾಗಿ ಎಸ್ಪಿ ಮತ ಚಲಾಯಿಸಲಿದೆ ಎಂದು ಸಂಸತ್ತಿನ ಹೊರಗಡೆ ಮುಲಾಯಂ ವರದಿಗಾರರಿಗೆ ತಿಳಿಸಿದರು.
ಪ್ರತಿ ಬಜೆಟ್ನಲ್ಲೂ ಎಸ್ಸಿ ಹಾಗೂ ಎಸ್ಟಿ ಜನಾಂಗಕ್ಕೆ ಅತಿ ಹೆಚ್ಚು ಅನುದಾನ ನೀಡಲಾಗುತ್ತಿತ್ತು, ಆದರೆ ಈ ಬಾರಿ ನೀಡಿಲ್ಲ ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಅವರು ಹೇಳಿದ್ದಾರೆ.