ಹೈಸ್ಫೋಟದ ಹಿಂದೆ ಐಎಂ ಭಟ್ಕಳ್ ಕೈವಾಡ: ಎನ್ಐಎ
ಹೈದ್ರಾಬಾದ್: ಹೈದ್ರಾಬಾದ್ ಅವಳಿ ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್ಐಎ), ಐಎಂನ ಅಪರೇಟಿಂಗ್ ಕಮಾಂಡರ್ ಯಾಸಿನ್ ಭಟ್ಕಳ್ ಕೈವಾಡವಿರುವುದರ ಬಗ್ಗೆ ಸಂಶಯ ವ್ಯಕ್ತ ಪಡಿಸಿದೆ.
ಗೃಹ ಸಚಿವಾಲಯಕ್ಕೆ ಎನ್ಐಎ ನೀಡಿದ ಪ್ರಾರಂಭಿಕ ವರದಿಯಲ್ಲಿ ಈ ವಿಷಯ ತಿಳಿದು ಬಂದಿದೆ. ಹೈದ್ರಾಬಾದ್ನಲ್ಲಿ ನಡೆದ ಸ್ಫೋಟದ ಸ್ಥಳದಲ್ಲಿ ಭಟ್ಕಳ್ ಅಲ್ಲೇ ಇದ್ದರು ಎಂದು ತನಿಖಾ ವರದಿ ಹೇಳುತ್ತಿದೆ. ಸ್ಫೋಟದ ಜಾಗದಲ್ಲಿ ಭಟ್ಕಳ್ ಇರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭಟ್ಕಳ್ ಅವರು ಖುದ್ದಾಗಿ ವೆಂಕಟಾದ್ರಿ ಚಿತ್ರಮಂದಿರಕ್ಕೆ ಸೈಕಲ್ನ್ನು ತಂದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸೈಕಲ್ನಲ್ಲಿ ಬಾಂಬ್ ಇಡಲು ಮೂರು ಜನರು ನಿರ್ಧರಿಸಿದ್ದು, ಇದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಈ ಸಂದರ್ಭದಲ್ಲೇ ಇಬ್ಬರು ಕಿಡಿಗೇಡಿಗಳು ಬಾಂಬ್ ಇಟ್ಟು ಪರಾರಿಯಾಗಲು ಸಹಾಯ ಮಾಡಿದ್ದಾರೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.
ಹೈದ್ರಾಬಾದ್ ಸ್ಫೋಟದ ಜಾಗದಲ್ಲಿ ಭಟ್ಕಳ್ ಹಾಜರಿದ್ದರಿಂದ ಹೆಚ್ಚು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಾಗಿದೆ. ವೆಂಕಟಾದ್ರಿ ಚಿತ್ರಮಂದಿರದ ಬಳಿ ಇರುವ ಬಸ್ ನಿಲ್ದಾಣದ ಲ್ಲಿ ಭಟ್ಕಳ್ ಸೈಕಲ್ ತಂದು ನಿಲ್ಲಿಸಿದ್ದಾರೆ. ಆದಾದ ಕೆಲವೇ ಗಂಟೆಗಳಲ್ಲಿ ಬಾಂಬ್ ಸ್ಫೋಟವಾಗಿದೆ.
ಇದಲ್ಲದೇ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಯುವಕರು ಕಳೆದ ಐದು ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದಾರೆ.