ಚುನಾವಣೆ ವೇಳೆ ಪೇಯ್ಡ್ ನ್ಯೂಸ್ಗೆ ಕಡಿವಾಣ ಹಾಕಿ: ಸಂಪತ್ಗೆ ಬಿಜೆಪಿ ಸಲಹೆ
ಬೆಂಗಳೂರು: ವಿಧಾನಸಭೆ ಚುನಾವಣೆ ವೇಳೆ ಪೇಯ್ಡ್ ನ್ಯೂಸ್ಗೆ ಕಡಿವಾಣ ಹಾಕುವಂತೆ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ಶುಕ್ರವಾರ ಬಿಜೆಪಿ ಸಲಹೆ ನೀಡಿದೆ.
ರಾಜ್ಯ ವಿಧಾನಸಭೆ ಸಿದ್ಧತೆ ಹಿನ್ನೆಲೆಯಲ್ಲಿ ಇಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಅವರು ರಾಜ್ಯದ ರಾಜಕೀಯ ಪಕ್ಷಗಳೊಂದಿಗೆ ವಿಧಾನಸಭೆಯಲ್ಲಿ ಸಮಾಲೋಚನೆ ನಡೆಸುತ್ತಿದ್ದು, ಚುನಾವಣೆ ವೇಳೆ ಮದ್ಯ, ಸೀರೆ ಹಂಚಿಕೆಗೂ ಕಡಿವಾಣ ಹಾಕಬೇಕು ಎಂದು ರಾಜಕೀಯ ಪಕ್ಷಗಳು ಮನವಿ ಮಾಡಿದವು.
ಸಂಪತ್ ನೇತೃತ್ವದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯ ಸಿದ್ಧತೆ ಪರಿಶೀಲನೆ ಹಾಗೂ ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಮಾರ್ಚ್ 15ರೊಳಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.