ಟಾಪ್ 10 ಪರಮಾಣು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ
ಅಲಿಗಢ್: ದೇಶದ ಅಭಿವೃದ್ಧಿ ಮತ್ತು ಭದ್ರತೆ ನಾಣ್ಯದ ಎರಡು ಮುಖಗಳಿದ್ದಂತೆ. ಇಂತಹ ಸಾಧನೆಯಲ್ಲಿ ಮುಂದಾಗಿರುವ ಭಾರತ, ವಿಶ್ವದ 10 ಪರಮಾಣು ರಾಷ್ಟ್ರಗಳಲ್ಲಿ ಒಂದಾಗಿದೆ.
ವಿಶ್ವದ 10 ಪರಮಾಣು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸೇರಿರುವುದು ದೇಶದ ಅಭಿವೃದ್ಧಿ ಮತ್ತು ಭದ್ರತೆಯಲ್ಲಿ ಮುನ್ನುಗ್ಗಿದಂತೆ ಎಂದು ಬಾಬಾ ಪರಮಾಣು ಸಂಶೋಧನಾ ಕೇಂದ್ರದ ಭೌತಶಾಸ್ತ್ರ ವಿಭಾಗದ ನಿರ್ದೇಶಕ ಎಸ್ ಕೈಲಾಸ್ ಹೇಳಿದ್ದಾರೆ.
ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತದಲ್ಲಿ ಶಕ್ತಿ ಸಂಪನ್ಮೂಲಗಳ ಕೊರತೆ ಹೆಚ್ಚಾಗಿದ್ದು ಭಾರತಕ್ಕೆ ಸವಾಲುಗಳು ಹೆಚ್ಚಾಗಿದೆ. ಆದ್ದರಿಂದ ಹೆಚ್ಚಾಗಿ ಅಣುಶಕ್ತಿ ಉತ್ಪಾದನೆ ಮಾಡುವುದರಿಂದ ಈ ಕೊರತೆಯನ್ನು ಸರಿದೂಗಿಸಬಹುದು ಎಂದು ಅವರು ತಿಳಿಸಿದ್ದಾರೆ.
ದೇಶದ ಪರಮಾಣುಶಕ್ತಿ ಅಭಿವೃದ್ಧಿಯಲ್ಲಿ ಹೋಮಿ ಬಾಬಾ ಮತ್ತು ಜವಹಾರ್ಲಾಲ್ ನೆಹರು ಪಾತ್ರ ಅಪಾರ ಎಂದು ಅವರು ಹೇಳಿದ್ದಾರೆ.