ಪೆಟ್ರೋಲ್ ದರ ಲೀಟರ್ಗೆ ರು. 1.40 ಏರಿಕೆ
ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನರಿಗೆ ಮತ್ತೊಮ್ಮೆ ತೈಲ ಕಂಪನಿಗಳು ಪೆಟ್ರೋಲ್ ದರ ಏರಿಕೆ ಮಾಡಿ ಮತ್ತೊಂದು ಶಾಕ್ ನೀಡಿದೆ.
ತೈಲಕಂಪನಿಗಳು ಶುಕ್ರವಾರ ಪ್ರತಿ ಲೀಟರ್ ಪೆಟ್ರೋಲ್ಗೆ ರು. 1.40 ಏರಿಕೆ ಮಾಡಿದ್ದು, ಇಳಿಕೆಗಿಂತ ಏರಿಕೆಯೇ ಹೆಚ್ಚಾಗಿದೆ.
ಮಧ್ಯರಾತ್ರಿಯಿಂದಲೇ ಬೆಲೆ ಜಾರಿಗೆ ಬರಲಿದೆ ಎಂದು ತೈಲ ಕಂಪನಿಗಳು ತಿಳಿಸಿವೆ.
ಕಳೆದ ಫೆಬ್ರವರಿಯಲ್ಲಿ ಲೀಟರ್ ಪೆಟ್ರೋಲ್ಗೆ ರು.1.5 ಮತ್ತು ಡೀಸೆಲ್ನ ಪ್ರತಿ ಲೀಟರ್ಗೆ 45 ಪೈಸೆ ಹೆಚ್ಚಿಸಲಾಗಿತ್ತು. ಅದರ ಬೆನ್ನಲ್ಲೇ ಮತ್ತೆ ಏರಿಕೆ ಮಾಡಿರುವುದು ಸಾಮಾನ್ಯ ಜನರಿಗೆ ಹೊಡೆತ ಕೊಟ್ಟಂತಾಗಿದೆ.