ಮಧು ಕೋಡಾಗೆ ಜಾಮೀನು ನೀಡಿದ ಸುಪ್ರೀಂ
ಅಕ್ರಮ ಹಣ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಜಾರ್ಖಾಂಡ್‌ನ ಮಾಜಿ ಮುಖ್ಯಮಂತ್ರಿ ಮಧು...
ನವದೆಹಲಿ: ಅಕ್ರಮ ಹಣ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಜಾರ್ಖಾಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ಜಾರ್ಖಾಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಮತ್ತು ಅವರ ಆಪ್ತ ವಿಕಾಸ್ ಕುಮಾರ್ ಸಿನ್ಹಾ ಅವರಿಗೆ ಸುಪ್ರೀಂ ಜಾಮೀನು ನೀಡಿದೆ.
ನ್ಯಾಯಾಮೂರ್ತಿ ಎಚ್.ಎಲ್ ದತ್ತು ಮತ್ತು ನ್ಯಾಯಾಮೂರ್ತಿ ರಂಜನ್ ಗೋಗಯ್ ದ್ವಿಭಾಗಿಯ ಪೀಠ ಈ ಆದೇಶ ಹೊರಡಿಸಿದೆ.
ಸುಮಾರು 3,549.72 ಕೋಟಿ ರೂಪಾಯಿ ಹಣ ಸಂಪಾದನೆ ಮಾಡಿದ್ದ ಆರೋಪದ ಮೇಲೆ 2012 ಸೆಪ್ಟೆಂಬರ್ 25ರಂದು ಮಧುಕೋಡಾ ಅವರ ಮೇಲೆ ಜಾರ್ಜ್‌ಶೀಟ್ ದಾಖಲಿಸಲಾಗಿತ್ತು.
ಅಕ್ರಮ ಹಣ ಸಂಪಾದನೆ ಪ್ರಕರಣದಲ್ಲಿ ಮಾತ್ರ ಕೊಡಾ ಅವರಿಗೆ ಸುಪ್ರೀಂ ಜಾಮೀನು ನೀಡಿರುವ ಹಿನ್ನಲೆಯಲ್ಲಿ ಕೋಡಾ ಅವರು ಜೈಲಿನಲ್ಲಿಯೇ ಉಳಿಯಲಿದ್ದಾರೆ. ಅವರ ಮೇಲಿರುವ ಭ್ರಷ್ಚಾಚಾರ ಆರೋಪ ಸೇರಿದಂತೆ ಇತರ ಪ್ರಕರಣಗಳನ್ನು ಅವರು ಎಂದುರಿಸಬೇಕಾಗಿದೆ.