'ಮೆಗಾ'ವಂಚನೆ: ಯೋಗೇಶ್ವರ್ ಜಾಮೀನು ಅರ್ಜಿ ವಜಾ
ಮೆಗಾಸಿಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಸಲ್ಲಿಸಿದ್ದ ನಿರೀಕ್ಷಣಾ...
ಬೆಂಗಳೂರು: ಮೆಗಾಸಿಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಹೈಕೋರ್ಟ್ ವಜಾಗೊಳಿಸಿದೆ.
ಯೋಗೇಶ್ವರ್ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿರುವ ಹೈಕೋರ್ಟ್ನ ಏಕ ಸದಸ್ಯ ಪೀಠ, ಸೆಷನ್ಸ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೆ 4ನೇ ಎಸಿಎಂಎಂ ಕೋರ್ಟ್ನಲ್ಲಿದ್ದ ಪ್ರಕರಣವನ್ನು 1ನೇ ಎಸಿಎಂಎಂ ಕೋರ್ಟ್ಗೆ ವರ್ಗಾಯಿಸಿ ಆದೇಶಿಸಿದೆ.
ಮೆಗಾಸಿಟಿ ವಂಚನೆ ಆರೋಪ ಎದುರಿಸುತ್ತಿರುವ ಸಿ.ಪಿ.ಯೋಗೇಶ್ವರ್ ವಿರುದ್ಧ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ವಿಶೇಷ ಆರ್ಥಿಕ ಅಪರಾಧ ತನಿಖಾ ದಳ(ಎಸ್ಎಫ್ಐ) ಚಾರ್ಜ್ಶೀಟ್ ದಾಖಲಿಸಿತ್ತು.
1995-2006 ರ ವೇಳೆ ಮೆಗಾಸಿಟಿ ಡೆವಲಪರ್ಸ್ ಎಂಬ ಸಂಸ್ಥೆಯ ಹೆಸರಿನಲ್ಲಿ ಯೋಗೇಶ್ವರ್ ಜನರಿಗೆ ನಿವೇಶನಗಳನ್ನು ನೀಡುವುದಾಗಿ ಸುಮಾರು 9000 ಜನರಿಂದ 64 ಕೋಟಿ ರು.ಗಳನ್ನು ಸಂಗ್ರಹಿಸಿದ್ದರು. ಇದರಲ್ಲಿ ಯೋಗೇಶ್ವರ್ ಅವರು ಸಂಸ್ಥೆಯ ಸುಮಾರು 3.60 ಕೋಟಿ ರು.ಗಳನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.